
ಲಖನೌ: ಉತ್ತರ ಪ್ರದೇಶದ ಆಗ್ರಾದ 11 ರ ಬಾಲಕನೊಬ್ಬ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ಗೆ ತಾನು ಬಳಲುತ್ತಿರುವ ಭಯಾನಕ ರೋಗ ರಕ್ತದ ಕ್ಯಾನ್ಸರ್ ಶಸ್ತ್ರಚಿಕಿತ್ಸೆಗೆ ನೆರವು ಕೋರಿ ಪತ್ರ ಬರೆದಿದ್ದಾನೆ.
ಇತ್ತೀಚೆಗೆ ಪ್ರಧಾನಿ ಮೋದಿಯವರು ಪುಣೆಯ ವೈಶಾಲಿ ಎಂಬ 7 ರ ಹರೆಯದ ಬಾಲಕಿಗೆ ಶಸ್ತ್ರಚಿಕಿತ್ಸೆಗೆ ನೆರವು ಕೋರಿ ಬರೆದ ಪತ್ರಕ್ಕೆ ಸ್ಪಂದಿಸಿದ ಮೋದಿ ಬಾಲಿಕಿಯ ಉಚಿತ ಚಿಕಿತ್ಸೆಗೆ ನೆರವಾಗಿದ್ದರು.
ಇದಲ್ಲದೆ ಕೆಲ ದಿನಗಳ ಹಿಂದೆ ಕಾನ್ಪುರದ ಬಡ ಮಕ್ಕಳು ತಮ್ಮ ತಂದೆ ಹಾಗೂ ತಮ್ಮ ಕುಟುಂಬದ ಅನಾವಸ್ಥೆ ಕುರಿತು ಬರೆದ ಪತ್ರಕ್ಕೆ ಮೋದಿ ತ್ವರಿತ ಸಹಾಯ ಮಾಡಿದ್ದರು. ಇಂತಹದೆ ನೆರವು ಕೋರಿ ಉತ್ತರ ಪ್ರದೇಶದ ಬಾಲಕ ಪ್ರಧಾನಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ಗೆ ಪತ್ರ ಬರೆದಿದ್ದಾನೆ.
Comments are closed.