ಮನೋರಂಜನೆ

ಮತ್ತೆ ಸುದ್ದಿಯಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ !

Pinterest LinkedIn Tumblr

virat-kohli---sanam

ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ನಡುವೆ ಏನಾಗುತ್ತಿದೆ ಎಂಬುದು ಎಲ್ಲರಿಗೂ ಯಕ್ಷಪ್ರಶ್ನೆ. ಮುನಿಸಿಕೊಂಡು ಬೇರಾಗಿದ್ದ ಜೋಡಿ ಇದ್ದಕ್ಕಿದ್ದಂತೆ ಜತೆಯಾಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ವಿರಾಟ್‌ ಮತ್ತೊಮ್ಮೆ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ.

‘ಸುಲ್ತಾನ್‌’ ಚಿತ್ರದ ಶೂಟಿಂಗ್‌ ಮುಗಿಸಿ ಅನುಷ್ಕಾ ‘ಪಿಲೌರಿ’ ಸೆಟ್‌ನಲ್ಲಿ ಬಿಝಿ ಇದ್ದಾರೆ. ಅಲ್ಲಿಗೆ ವಿರಾಟ್‌ ಭೇಟಿ ನೀಡಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ. ಜಾಸ್ತಿ ದಿನ ಪ್ರೇಮಿಯನ್ನು ನೋಡದೆ ಇರಲು ಸಾಧ್ಯವಿಲ್ಲ ಎಂಬುದು ವಿರಾಟ್‌ ನೀಡಿದ ಸರ್‌ಪ್ರೈಸ್‌ ವಿಸಿಟ್‌ನಲ್ಲಿ ಗೊತ್ತಾಗಿದೆ.

ಇದೇ ಸ್ವಲ್ಪ ದಿನಗಳ ಹಿಂದೆ ಅನುಷ್ಕಾ ಶರ್ಮ ದೆಹಲಿಗೆ ಹೋಗಿ ಅಲ್ಲಿ ವಿರಾಟ್‌ ಹೆತ್ತವರನ್ನು ಭೇಟಿ ಆಗಿದ್ದರು. ಅಲ್ಲದೆ ಇವರಿಬ್ಬರು ಮಿನಿ ವೆಕೇಷನ್‌ ಮೇಲೆ ಏಕಾಂತದ ಸಮಯವನ್ನು ಜತೆಯಾಗಿ ಕಳೆಯಲಿದ್ದಾರೆ ಎಂಬ ಸುದ್ದಿಯೂ ಇತ್ತು. ಆದರೆ ಸದ್ಯ ಅನುಷ್ಕಾ ‘ಪಿಲೌರಿ’ಯಲ್ಲಿ ಬಿಝಿ ಆಗಿದ್ದು, ವಿರಾಟ್‌ ಅತ್ತ ಕಡೆ ಹೋಗಿ ಸಪ್ರೈಸ್‌ ನೀಡಿದ್ದಾರೆ. ಶೂಟಿಂಗ್‌ ಸೆಟ್‌ನಲ್ಲಿ ಕ್ಲಿಕ್‌ ಮಾಡಿರುವ ಸೆಲ್ಫಿಯನ್ನು ವಿರಾಟ್‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿರಾಟ್‌ಗೆ ತಮ್ಮ ಲೇಡಿಲವ್‌ ಅನುಷ್ಕಾ ಮುಖದಲ್ಲಿ ನಗು ಮೂಡಿಸುವುದು ಹೇಗೆ ಎಂಬುದು ಚೆನ್ನಾಗಿ ತಿಳಿದಂತಿದೆ. ಸಿನಿಮಾ ಸೆಟ್‌ನಲ್ಲಿ ಒಂದಷ್ಟು ಹೊತ್ತು ಅನುಷ್ಕಾ ಜತೆ ಸಮಯ ಕಳೆದ ವಿರಾಟ್‌, ಅಲ್ಲಿದ್ದವರ ಮನಸಿನಲ್ಲಿ ಇದ್ದರೆ ಇಂತಹ ಲವರ್‌ ಇರಬೇಕಪ್ಪ ಎಂದು ಅಸೂಯೆ ಮೂಡುವಂತೆ ಮಾಡಿದ್ದಾರೆ.

Comments are closed.