ಕರ್ನಾಟಕ

ಭಾರತ ತಂಡದ ಕೋಚ್ ಹುದ್ದೆಗೆ ಕನ್ನಡಿಗ ಕುಂಬ್ಳೆ ಅರ್ಜಿ

Pinterest LinkedIn Tumblr

NEW DELHI, INDIA - NOVEMBER 01: Anil Kumble of India bowls during day four of the Third Test match between India and Australia at Feroz Shah Kotla Stadium on November 1, 2008 in New Delhi, India. (Photo by Global Cricket Ventures/BCCI via Getty Images) *** Local Caption *** Anil Kumble

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಅರ್ಜಿ ಸಲ್ಲಿಸಿದ್ದಾರೆ.

ತಂಡದ ಕೋಚ್‌ ಹುದ್ದೆಗೆ ಬಿಸಿಸಿಐಗೆ ಸಲ್ಲಿಕೆಯಾಗಿರುವ 57 ಅರ್ಜಿಗಳಲ್ಲಿ ಭಾರತ ತಂಡದ ಮಾಜಿ ನಾಯಕ ಕುಂಬ್ಳೆ ಅವರ ಅರ್ಜಿಯೂ ಇದೆ ಎಂದು ಮೂಲಗಳು ಖಚಿತಪಡಿಸಿವೆ.

‘ಕುಂಬ್ಳೆ ಅವರು ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್‌ ತಂಡಗಳಿಗೆ ಸಲಹೆಗಾರರಾಗಿದ್ದರು. ಲೆಗ್‌ಸ್ಪಿನ್ ಬೌಲರ್ ಮತ್ತು ನಾಯಕರಾಗಿ ಅವರು ಉತ್ತಮ ಅನುಭವ ಹೊಂದಿದ್ದಾರೆ. ಹುದ್ದೆಗೆ ಅರ್ಜಿ ಸಲ್ಲಿಸಿರುವ ಪ್ರಮುಖರಲ್ಲಿ ಅವರೂ ಒಬ್ಬರಾಗಿದ್ದಾರೆ’ ಎಂದು ಬಿಸಿಸಿ ಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ, ಮಾಜಿ ಬೌಲರ್ ವೆಂಕಟೇಶ ಪ್ರಸಾದ್, ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಕೂಡ ಅರ್ಜಿ ಸಲ್ಲಿಸಿದ್ದಾರೆ.
ಕರ್ನಾಟಕದ ಕುಂಬ್ಳೆ ಅವರು 132 ಟೆಸ್ಟ್‌ಗಳನ್ನು ಆಡಿ 619 ವಿಕೆಟ್‌ ಗಳಿಸಿದ್ದರು. 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಲ್ಲದೇ ಟೆಸ್ಟ್‌ನಲ್ಲಿ 2506 ರನ್‌ ಗಳನ್ನೂ ಪೇರಿಸಿದ್ದಾರೆ.

Comments are closed.