ರಾಷ್ಟ್ರೀಯ

ಮಕ್ಕಳ ಕಳ್ಳ ಸಾಗಣೆ ಜಾಲ ಪತ್ತೆ: ಐವರು ಬಾಲಕಿಯರ ರಕ್ಷಣೆ

Pinterest LinkedIn Tumblr

humantrafficking_0_0ಕಣ್ಣೂರು (ಪಿಟಿಐ): ಅಂತರರಾಜ್ಯ ಮಕ್ಕಳ ಕಳ್ಳ ಸಾಗಣೆ ಜಾಲವನ್ನು ಭೇದಿಸಿರುವ ಕೇರಳ ಪೊಲೀಸರು, ಆಂಧ್ರಪ್ರದೇಶ ಮೂಲದ ಐವರು ಬಾಲಕಿಯರನ್ನು ರಕ್ಷಿಸಿದ್ದಾರೆ.
ರಕ್ಷಿಸಲಾದ ಬಾಲಕಿಯರ ವಯಸ್ಸು ಏಳರಿಂದ 16 ಎಂದು ತಿಳಿದು ಬಂದಿದೆ.

ಕಳ್ಳ ಸಾಗಣೆದಾರರು ಬಾಲಕಿಯರ ಪೋಷಕರಿಗೆ ಹಣದ ಆಮಿಷ ಒಡ್ಡಿ ಕರೆತಂದು ಮನೆಗಳಲ್ಲಿ ಅಕ್ರಮವಾಗಿ ಕೆಲಸ ಮಾಡಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಸ್ವಯಂ ಸೇವಾ ಸಂಸ್ಥೆಯೊಂದು ನೀಡಿದ ಮಾಹಿತಿ ಆಧರಿಸಿ ಮನೆಗಳ ಮೇಲೆ ದಾಳಿ ನಡೆಸಲಾಯಿತು. ಪ್ರಕರಣ ಸಂಬಂಧ ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ಮೂಲದ ಮೂವರನ್ನು ಬಂಧಿಸಲಾಗಿದೆ. ಜಾಲದ ಜಾಲದ ಕಿಂಗ್‌ಪಿನ್ ಷರೀಫ್ (56) ಎಂದು ಪೊಲೀಸರು ತಿಳಿಸಿದ್ದಾರೆ.

ರಕ್ಷಿಸಲಾದ ಬಾಲಕಿಯರನ್ನು ಬಾಲಮಂದಿರದಲ್ಲಿ ಇರಿಸಲಾಗಿದೆ. ಅವರಿಂದ ಮಾಹಿತಿ ಪಡೆದು ಅವರ ಪೋಷಕರಿಗೆ ಒಪ್ಪಿಸಲಾಗುವುದು ಎಂದು ಎಸ್‌ಐ ಇ.ವಿ.ಶಿಬು ಹೇಳಿದ್ದಾರೆ.

Comments are closed.