ರಾಷ್ಟ್ರೀಯ

ಆರ್‍‍ಬಿಐ ಗವರ್ನರ್ ನೇಮಕ ಹೇಗೆ ಎಂದು ನನಗೆ ಗೊತ್ತಿಲ್ಲ: ಸದಾನಂದ ಗೌಡ

Pinterest LinkedIn Tumblr

SadanandaGowda

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಅವರ ಅಧಿಕಾರಾವಧಿ ವಿಸ್ತರಣೆಯ ಬಗ್ಗೆ ದೇಶಾದ್ಯಂತ ಚರ್ಚೆ ನಡೆಯುತ್ತಿದೆ. ಆದರೆ ಕೇಂದ್ರ ಕಾನೂನು ಸಚಿವ ಸದಾನಂದ ಗೌಡರಿಗೆ ಈ ಬಗ್ಗೆ ಏನೂ ಗೊತ್ತಿಲ್ಲ!

ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದ ಸದಾನಂದ ಗೌಡರು, ರಿಸರ್ವ್ ಬ್ಯಾಂಕ್ ಗವರ್ನರ್ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಪಟ್ಟಿ ತಯಾರಿಸಿದೆ ಎಂಬುದರ ಬಗ್ಗೆ ನನಗೆ ಮಾಹಿತಿ ಇಲ್ಲ .

ಅಭ್ಯರ್ಥಿಗಳ ಆಯ್ಕೆಗಾಗಿ ಸಮಿತಿ ರೂಪಿಸಿರುವ ಬಗ್ಗೆಯೂ ನನಗೆ ಗೊತ್ತಿಲ್ಲ. ಗವರ್ನರ್ ಅವರ ಆಯ್ಕೆ ಹೇಗೆ ಆಗುತ್ತದೆ ಎಂಬುದರ ಬಗ್ಗೆಯೂ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.

ರಾಜನ್ ಅವರ ಅಧಿಕಾರ ವಿಸ್ತರಣೆಯನ್ನು ಮಾಡದೆ ಹೊಸ ಅಭ್ಯರ್ಥಿಗಳನ್ನು ಗವರ್ನರ್ ಸ್ಥಾನಕ್ಕೆ ನೇಮಕ ಮಾಡುವುದಕ್ಕಾಗಿ ಸರಕಾರ ಸಮಿತಿಯನ್ನು ರಚಿಸಲಿದೆಯೇ? ಎಂಬ ಪ್ರಶ್ನೆಗೆ ಗೌಡರು ಈ ರೀತಿ ಉತ್ತರಿಸಿದ್ದಾರೆ.

Comments are closed.