ಕರ್ನಾಟಕ

ಇಬ್ಬರಿಗೆ 1ಖಾತೆ; ಒಬ್ಬರು ಹಣ ಜಮಾ ಮಾಡಿದ್ರೆ, ಮತ್ತೊಬ್ರು ತೆಗೆದ್ರು

Pinterest LinkedIn Tumblr

Moneyಹೊಸಪೇಟೆ: ಒಂದೇ ಹೆಸರಿನ ಇಬ್ಬರಿಗೆ ಒಂದೇ ಖಾತೆ ಸಂಖ್ಯೆ ನೀಡಿದ ಬ್ಯಾಂಕ್‌ ಸಿಬ್ಬಂದಿ ಎಡವಟ್ಟಿನಿಂದ ಒಬ್ಬರು ಹಣ ಸಂದಾಯ ಮಾಡಿದರೆ; ಇನ್ನೊಬ್ಬರು ಹಣ ತೆಗೆಯುತ್ತಿರುವ ಪ್ರಕರಣ ತಡವಾಗಿ ಬೆಳಧಿಕಿಗೆ ಬಂದಿದೆ.

ಲಕ್ಷ್ಮೀ ನಾಗರಾಜ್‌ ಎಂಬುವವರು ತಾಲೂಕಿನ ಕಮಲಾಪುರದ ಬ್ಯಾಂಕ್‌ ಆಫ್ ಇಂಡಿಯಾ ಶಾಖೆಯಲ್ಲಿ 2014ರ ಡಿಸೆಂಬರ್‌ 20ರಂದು ಜನಧನ್‌ ಯೋಜನೆ ಅಡಿಯಲ್ಲಿ ಖಾತೆ ತೆರೆದಿದ್ದಾರೆ. ಅವರಿಗೆ ಬ್ಯಾಂಕಿನಿಂದ 842210510001579 ಸಂಖ್ಯೆ ನೀಡಲಾಗಿದೆ. ಅದೇ ಹೆಸರಿನ ಇನ್ನೊಬ್ಬರು ಅದೇ ಬ್ಯಾಂಕಿನಲ್ಲಿ ಖಾತೆ ತೆರೆದಿದ್ದು, ಅವರಿಗೂ ಅದೇ ಸಂಖ್ಯೆ ನೀಡಲಾಗಿದೆ. ಒಬ್ಬರು ಹಣ ಜಮಾ ಮಾಡಿದರೆ ಇನ್ನೊಬ್ಬರು ಅದನ್ನು ತೆಗೆಯುತ್ತಿದ್ದಾರೆ.

ಒಮ್ಮೆ ಲಕ್ಷ್ಮೀ ನಾಗರಾಜ್‌ರವರ ಖಾತೆಗೆ 6,436 ರೂ. ಜಮಾ ಆಗಿದೆ. ಬಳಿಕ 465 ರೂ. ಉಳಿದಿದೆ. ಇದರಿಂದ ಗಾಬರಿಯಾದ ಅವರು ಖಾತೆಯಿಂದ ಯಾರು ತೆಗೆಯುತ್ತಿದ್ದಾರೆ ಎಂದು ಪರಿಶೀಲಿಸಲು 2016ರ ಮೇ 25ರಂದು ಮತ್ತೆ 2000 ರೂ. ಜಮೆ ಮಾಡಿದ್ದಾರೆ. ಆದರೆ, ಲಕ್ಷ್ಮೀಯವರ ಪಾಸ್‌ ಬುಕ್‌ಗೆ ಜಮೆಯಾಗದೇ; ಮತ್ತೂಬ್ಬ ಲಕ್ಷ್ಮೀಯವರ ಖಾತೆಗೆ ಜಮೆಯಾಗಿದೆ. ಬ್ಯಾಂಕಿನ ಸಿಬ್ಬಂದಿಯ ಎಡವಟ್ಟಿನಿಂದ ಹಣ ಕಳೆದುಕೊಂಡಿರುವ ಲಕ್ಷ್ಮೀ ನಿತ್ಯ ಬ್ಯಾಂಕ್‌ಗೆ ಎಡತಾಕುತ್ತಿದ್ದಾರೆ. ಇಬ್ಬರನ್ನು ಕರೆದು; ಆಗಿರುವ ಲೋಪವನ್ನು ಸರಿಪಡಿಸಿ; ಹೊಸ ಖಾತೆ ತೆರೆದು ಪ್ರಕರಣಕ್ಕೆ ಸುಖ್ಯಾಂತ ಕಾಣಿಸಲು ಬ್ಯಾಂಕ್‌ನ ಸಿಬ್ಬಂದಿ ಮುಂದಾಗಿದ್ದಾರೆ.
-ಉದಯವಾಣಿ

Comments are closed.