ಕರ್ನಾಟಕ

ರಾಜ್ಯಸಭೆ ಚುನಾವಣೆ ಸಿಬಿಐ ತನಿಖೆಗೆ ರೇವಣ್ಣ ಆಗ್ರಹ

Pinterest LinkedIn Tumblr

HDrevannaಬೆಂಗಳೂರು, ಜೂ.೧೧-ಅಕ್ರಮಗಳ ಆಗರವಾಗಿರುವ ರಾಜ್ಯಸಭೆ ಚುನಾ ವಣೆಯ ಇಡೀ ಪ್ರಕ್ರಿಯೆಯನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಜೆಡಿಎಸ್‌ನ
ಹಿರಿಯ ಶಾಸಕ ಹೆಚ್.ಡಿ ರೇವಣ್ಣ ಇಂದಿಲ್ಲಿ ಕೇಂದ್ರ ಚುನಾವಣಾ ಆಯೋಗ ವನ್ನು ಒತ್ತಾಯಿಸಿದ್ದಾರೆ. ಆಡಳಿತಾರೂಡ ಕಾಂಗ್ರೆಸ್ ಪಕ್ಷ ಆಡಳಿತಯಂತ್ರವನ್ನು ದುರುಪಯೋಗ ಮಾಡಿಕೊಂಡಿದೆ. ಹೀಗಾಗಿ ಇಡಿ ರಾಜ್ಯಸಭೆಯ ಚುನಾವಣಾ ಪ್ರಕ್ರಿಯೆ ಯನ್ನು ಸಿಬಿಐ ತನಿಖೆಗೆ ವಹಿಸುವುದ
ರಿಂದ ಸತ್ಯಾಸತ್ಯತೆ ಹೊರಬರಲಿದೆ ಎಂದು ಆಗ್ರಹಿಸಿದರು.
ಮತದಾನ ಕೇಂದ್ರದಲ್ಲಿ ಇಂದನ ಸಚಿವ ಡಿ.ಕೆ ಶಿವಕುಮಾರ್ ಅವರೊಂದಿಗೆ ಮಾತಿನ ಚಕಮಕಿ ನಡೆದ ನಂತರ ಹೊರಗಡೆ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಶಾಸಕ ರಾಮಕೃಷ್ಣ ದೈಹಿಕವಾಗಿ ಸಾಮರ್ಥ್ಯ ಹೊಂದಿದ್ದರೂ ಅನಾರೋಗ್ಯ ಪೀಡಿತ ರೆಂದು ಸುಳ್ಳು ಪ್ರಮಾಣ ಪತ್ರ ತರಲಾಗಿದೆ. ಇಷ್ಟಕ್ಕೂ ಸಹಾಯಕರಾಗಿ ಬಂದಿದ್ದ ಗೋವಿಂದರಾಜ್ ಕಾಂಗ್ರೆಸ್‌ನ ವಿಧಾನಪರಿಷತ್ ಸದಸ್ಯ ಅವರಿಗೇನು ಕೆಲಸ ಎಂದು ಪ್ರಶ್ನಿಸಿದರು.
ವೈದ್ಯರ ಪ್ರಮಾಣ ಪತ್ರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಬೇರೆ ಪ್ರಮಾಣ ಪತ್ರ ತರಲು ಹೋಗಿದ್ದಾರೆ. ರಾಮಕೃಷ್ಣ ಮತದಾನ ಮಾಡಿದರೆ ಅದನ್ನು ಅಸಿಂಧುಗೊಳಿಸಬೇಕೆಂದು ರಾಜ್ಯ ಚುನಾವಣಾಧಿರಿಗಳಿಗೆ ದೂರು ನೀಡಲಾಗಿದೆ ಎಂದು ಹೇಳಿದರು.
ನೀವೇನು ಸೋಲಿನ ಭೀತಿಯಿಂದ ಹತಾಶರಾಗಿ ಸಿಬಿಐ ತನಿಖೆಗೆ ಒಪ್ಪಿಸಬೇಕು ಎನ್ನುತ್ತಿದ್ದೀರಾ ಎನ್ನುವ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರೇವಣ್ಣ ಸಾಕಷ್ಟು ಸೋಲು ಗೆಲುವು ಕಂಡಿದ್ದೇನೆ ಹತಾಶೆಯ ಪ್ರಶ್ನೆಯೇ ಇಲ್ಲ ಆದರೆ ಸಚಿವರಾಗಿರುವ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ಏಜೆಂಟರಾಗುವ ಮೂಲಕ ಮತದಾರರ ಮೇಲೆ ಪ್ರಭಾವಬೀರುತ್ತಿದ್ದಾರೆ ಇದು ಸರಿಯಲ್ಲ ಎಂದರು.

Comments are closed.