ರಾಷ್ಟ್ರೀಯ

ಕನಯ್ಯಾ ಕುಮಾರ್ ದೇಶ ವಿರೋಧಿ ಘೋಷಣೆ ಕೂಗಿದ್ದು ನಿಜ

Pinterest LinkedIn Tumblr

kanhaiya_kumarನವದೆಹಲಿ (ಪಿಟಿಐ): ಫೆಬ್ರವರಿ 9ರಂದು ನವದೆಹಲಿಯ ಜವಾಹರ್ ಲಾಲ್ ನೆಹರು ವಿಶ್ವವಿದ್ಯಾನಿಯದಲ್ಲಿ ಅಲ್ಲಿನ ವಿದ್ಯಾರ್ಥಿ ಸಂಘಟನೆಗಳ ಅಧ್ಯಕ್ಷ ಕನಯ್ಯಾ ಕುಮಾರ್ ಮತ್ತು ಇನ್ನಿಬ್ಬರು ವಿದ್ಯಾರ್ಥಿಗಳು ದೇಶ ವಿರೋಧಿ ಘೋಷಣೆ ಕೂಗಿದ್ದು ನಿಜ ಎಂಬುದು ದೃಢಪಟ್ಟಿದೆ.

ಜೆಎನ್‍ಯುನಲ್ಲಿ ನಡೆದ ಕಾರ್ಯಕ್ರಮದ ವೀಡಿಯೊವನ್ನು ಪರಿಶೀಲಿಸಿದ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯ ಆ ವೀಡಿಯೊ ನಕಲಿ ಅಲ್ಲ ಎಂದು ಹೇಳಿದೆ.
ಕನಯ್ಯಾ ಮತ್ತು ಇನ್ನಿತರ ವಿದ್ಯಾರ್ಥಿಗಳು ದೇಶ ವಿರೋಧಿ ಘೋಷಣೆ ಕೂಗುತ್ತಿರುವ ದೃಶ್ಯವನ್ನು ಸುದ್ದಿ ವಾಹಿನಿಯೊಂದು ರೆಕಾರ್ಡ್ ಮಾಡಿತ್ತು. ರೆಕಾರ್ಡ್ ಮಾಡಿದ ಕ್ಯಾಮೆರಾ, ಮೆಮೊರಿ ಕಾರ್ಡ್ ಮತ್ತು ವೀಡಿಯೊ ಇರುವ ಸಿಡಿಯನ್ನು ಪರಿಶೀಲನೆ ನಡೆಸಿದ ವಿಧಿವಿಜ್ಞಾನ ಪ್ರಯೋಗಾಲಯ ಆ ವೀಡಿಯೊ ಅಸಲಿ ಎಂದು ಹೇಳಿದೆ.

ಕಳೆದ ಫೆ.9ರಂದು ದೆಹಲಿಯ ಜೆಎನ್‍ಯು ಆವರಣದಲ್ಲಿ ಸಂಸತ್ ಮೇಲೆ ದಾಳಿ ನಡೆಸಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಫ್ಜಲ್‌ ಗುರುವಿನ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ ಎಂಬ ಆರೋಪದ ಮೇಲೆ ಕನಯ್ಯಾ ಕುಮಾರ್, ಉಮರ್ ಖಾಲಿದ್ ಮತ್ತು ಅನಿರ್ಭನ್ ಭಟ್ಟಾಚಾರ್ಯರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದರು.

Comments are closed.