ರಾಷ್ಟ್ರೀಯ

ಹರಿಯಾಣ: ಶಿಕ್ಷಕರಿಗೆ ಜೀನ್ಸ್‌ ಪ್ಯಾಂಟ್‌ ನಿಷೇಧ

Pinterest LinkedIn Tumblr

jeansಚಂಡೀಗಡ (ಪಿಟಿಐ): ಶಿಕ್ಷಕರು ಶಾಲೆಯಲ್ಲಿರುವಾಗ ಜೀನ್ಸ್ ಪ್ಯಾಂಟ್ ಧರಿಸಬಾರದು ಎಂದು ಹರಿಯಾಣದ ಶಿಕ್ಷಣ ಇಲಾಖೆ ನಿಷೇಧ ಹೇರಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.

ಶಾಲೆಗಳಲ್ಲಿ ಮಕ್ಕಳು ಶಿಕ್ಷಕರನ್ನು ಗಮನಿಸುತ್ತಿರುತ್ತಾರೆ. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾದರಿಯಾಗಿರಬೇಕು. ಶಿಕ್ಷಕರು ಸಬ್ಯ ಉಡುಪು ಧರಿಸಬೇಕು. ಒಂದು ವೇಳೆ ಜೀನ್ಸ್ ಪ್ಯಾಂಟ್ ಧರಿಸಿದರೆ ಅದನ್ನು ಅನುಚಿತ ಉಡುಪು ಎಂದು ಪರಿಗಣಿಸಲಾಗುವುದು ಎಂದು ಇಲಾಖೆ ಹೇಳಿದೆ.

ಅಲ್ಲದೇ, ಶಿಕ್ಷಕರು ಕಡ್ಡಾಯವಾಗಿ ಶಾಲೆಗೆ ಫಾರ್ಮಲ್ ಉಡುಗೆಯಲ್ಲಿ ಬರಬೇಕು ಎಂದು ಇಲಾಖೆ ಆದೇಶ ಹೊರಡಿಸಿದೆ. ಹರಿಯಾಣ ವಿದ್ಯಾಲಯ ಶಿಕ್ಷಕರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಇಲಾಖೆಯ ಈ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿವೆ.

‘ಇದು ಇಲಾಖೆಯ ತಪ್ಪು ನಿರ್ಧಾರವಾಗಿದೆ. ಶಿಕ್ಷಕರ ಉಡುಪಿನ ಮೇಲೆ ಸರ್ಕಾರ ನಿರ್ಬಂಧ ಹೇರಿರುವುದು ಸರಿಯಲ್ಲ. ಬೋಧನೆ ಮಾಡುವುದು ಶಿಕ್ಷಕರ ಕೆಲಸ. ಅವರು ಯಾವ ಉಡುಪು ಧರಿಸಿ ಪಾಠ ಮಾಡುತ್ತಾರೆ ಎಂಬುವುದು ಮುಖ್ಯವಲ್ಲ’ ಎಂದು ಸಂಘದ ಅಧ್ಯಕ್ಷ ವಾಝೀರ್‌ ಸಿಂಗ್ ಹೇಳಿದ್ದಾರೆ.

ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಎಂದು ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಮತ್ತು ಇದರ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಸಿಂಗ್ ಎಚ್ಚರಿಸಿದ್ದಾರೆ.

Comments are closed.