ರಾಷ್ಟ್ರೀಯ

ತಮಿಳುನಾಡಿನಲ್ಲಿ ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಎಐಎಡಿಎಂಕೆ ಶಾಸಕ ನಿಧನ

Pinterest LinkedIn Tumblr

AIADMK

ಮಧುರೈ: 15 ನೇ ತಮಿಳುನಾಡು ವಿಧಾನಸಭೆ ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಎಐಎಡಿಎಂಕೆ ಶಾಸಕ ಎಸ್.ಎಂ ಸೀನಿವೈಲ್ ಅಸು ನೀಗಿದ್ದಾರೆ.

65 ವರ್ಷದ ಸೀನಿವೈಲ್ ತಿರುಪ್ಪರಕುಂದರಮ್ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿದ್ದರು. ಪಾರ್ಶ್ವವಾಯುಗೆ ತುತ್ತಾಗಿದ್ದ ಸೀನಿವೈಲ್ ಮಧುರೈ ನ ವಡಮಲಯಂ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೃತರು ಪತ್ನಿ, ಮೂವರು ಹೆಣ್ಣು ಮಕ್ಕಳು ಮತ್ತು ಒಬ್ಬ ಪುತ್ರನನ್ನು ಅಗಲಿದ್ದಾರೆ. ಕಳೆದ ಮೇ 18 ರಂದು ಪಾರ್ಶ್ವಪಾಯು ಪೀಡಿತರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸೀನಿವೈಲ್ ಅವರನ್ನು ಸತ್ತು ಹೋದರೆಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು.

Comments are closed.