ಕರ್ನಾಟಕ

ವಿಕಲಚೇತನ ವಿದ್ಯಾರ್ಥಿಯ ಸಾಧನೆ ನೋಡಿ….

Pinterest LinkedIn Tumblr

dinesh

ಕುಮಟಾ: ಸಾಧನೆಗೆ ಅಂಗವೈಕಲ್ಯ ಅಡ್ಡಿಯಲ್ಲ ಎಂಬುದನ್ನು ಹರ್ಕಡೆಯ ದಿನೇಶ ಬೀರಾ ಗೌಡ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.93.76 ಅಂಕ ಗಳಿಸುವ ಮೂಲಕ ತೋರ್ಪಡಿಸಿದ್ದಾನೆ.

ಹರ್ಕಡೆ ನಿವಾಸಿಯಾದ ದಿನೇಶ ಸಂಪೂರ್ಣ ಅಂಗವಿಕಲನಾಗಿದ್ದು, ದಿವಗಿಯ ಡಿಜೆವಿಎಸ್ ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾನೆ. ಈತನ ದೈನಂದಿನ ಕಾರ್ಯಕ್ಕೂ ಪಾಲಕರ ಆಸರೆ ಬೇಕಾಗಿದೆ. ಮನೆಯಲ್ಲಿ ಕಡು ಬಡತನವಿದ್ದರೂ ಬೀರಾ ಗೌಡ ಅವರು ಪುತ್ರನಿಗೆ ಶಿಕ್ಷಣ ಕೊಡಿಸುವಲ್ಲಿ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಕೂಲಿ ಮಾಡಲು ತೆರಳುವ ಮುನ್ನ ಮಗನನ್ನು ಶಾಲೆಗೆ ಬಿಟ್ಟು ಬರುವುದು ಹಾಗೂ ಸಂಜೆ ಮನೆಗೆ ಕರೆತರುತ್ತಿದ್ದರು. ಅಲ್ಲದೆ, ದಿನೇಶನ ಎಲ್ಲ ಕೆಲಸಗಳನ್ನು ತಂದೆಯೇ ಮಾಡುತ್ತಿದ್ದುದರಿಂದ ತಂದೆ-ತಾಯಿಯೇ ದೇವರಾಗಿದ್ದಾರೆ.

ದಿನೇಶ ಕೂಡ ಪಾಲಕರ ಶ್ರಮವನ್ನು ವ್ಯರ್ಥವಾಗಿಸದೇ ಎಸ್ಸೆಸ್ಸೆಲ್ಸಿಯಲ್ಲಿ 586 ಅಂಕಗಳನ್ನು ಗಳಿಸಿ ಸಾಧನೆ ಮಾಡಿದ್ದಾನೆ.ಇವರ ಸಾಧನೆ ಪಾಲಕರಿಗೆ ಖುಷಿ ತಂದುಕೊಡುವ ಜತೆಗೆ ಪುತ್ರನಿಗೆ ಇನ್ನೂ ಹೆಚ್ಚಿನ ಶಿಕ್ಷಣ ಕೊಡಿಸುವ ಹಂಬಲ ಮೂಡುವಂತಾಗಿದೆ. ಆದರೆ, ಸಂಪೂರ್ಣ ಅಂಗವಿಕಲನಾದ ದಿನೇಶನನ್ನು ಕುಮಟಾ ಕಾಲೇಜ್ವರೆಗೆ ಕರೆತರುವುದೇ ದೊಡ್ಡ ಸವಾಲಾಗಿದೆ.

Comments are closed.