ಕರಾವಳಿ

‘ಕಸವಿರುವ ನೀರು ಕೊಡ್ತಾರೆ’; ಉಡುಪಿ ಬನ್ನೆಂಜೆಯ ಪೀರಭಾಗ್‌ನ ಪರಿಶಿಷ್ಠ ಕಾಲನಿ ನಿವಾಸಿಗಳ ಆರೋಪ

Pinterest LinkedIn Tumblr

ಉಡುಪಿ: ಒಂದೆಡೆ ಜಿಲ್ಲೆಯ ಹಲವೆಡೆ ಕುಡಿಯುವ ನೀರಿಗೆ ತತ್ವಾರ ಒದಗಿದೆ. ಇನ್ನು ಅಲ್ಲಲ್ಲಿ ಕೊಡುವ ನೀರು ಕೂಡ ಕಲುಷಿತವಾಗಿರೋದು ಅ ಭಾಗದ ಜನರನ್ನು ಕಂಗೆಡಿಸಿದೆ. ನಗರಸಭೆಯ ಕೊಡುವ ನೀರು ಕೂಡಾ ಕಲುಷಿತ ಎಂಬ ಕಾರಣ ಜನರು ಮಾತ್ರ ಅತಂತ್ರದ ಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಬನ್ನಂಜೆಯ ಕೆಲ ಮನೆಗಳಿಗೆ ನಗರಸಭೆಯಿಂದ ವಿತರಿಸಿದ ನೀರಿನಲ್ಲಿ ಕಸದಿಂದ ಕೂಡಿದ್ದು ನಿವಾಸಿಗಳು ಕುಡಿಯುವ ಪರಿಸ್ಥಿತಿಯಲ್ಲಿಲ್ಲ.

Udupi_Water_Problem (1) Udupi_Water_Problem (2) Udupi_Water_Problem (3) Udupi_Water_Problem (4)

ಉಡುಪಿ ಬನ್ನೆಂಜೆಯ ಪೀರಭಾಗ್ ಮುಂಭಾಗದ ಪರಿಶಿಷ್ಠ ಕಾಲನಿಗೆ ಈ ಕಲುಶಿತ ನೀರನ್ನು ನಗರಸಭೆ ಸರಬಾರಾಜು ಮಾಡಿದೆ. ಇಂದು ಬೆಳಿಗ್ಗೆ ನಗರ ಸಭೆಯವರು ಸರಬರಾಜು ಮಾಡಿದ ನೀರುನಲ್ಲಿ ಕ್ರಿಮಿಗಳಿರುವ ನೀರನ್ನು ಸರಬರಾಜು ಮಾಡಲಾಗಿದೆ. ಈ ಬಗ್ಗೆ ವಿತರಣೆ ಮಾಡುವವರನ್ನು ವಿಚಾರಿಸಿದಾಗ ಬಜೆಯಿಂದ ಮಣಿಪಾಲಕ್ಕೆ ತರುವ ನೀರನ್ನು ತುಂಬಿಸಿ ತರಲಾಗಿದೆ ಎಂದು ಉತ್ತರಿಸುತ್ತಾರೆ.

ಕುಲಿ ಕಾರ್ಮಿಕರು ಹೆಚ್ಚಿರು ಪ್ರದೇಶದಲ್ಲಿ ಇಂತ ನೀರನ್ನು ಸರಬರಾಜು ಮಾಡಿದಲ್ಲಿ ಈ ಭಾಗದ ಜನರು ರೋಗಗಳಿಗೆ ತುತ್ತಾಗುತ್ತಾರೆ ಕೆಲಸಕ್ಕೆ ಹೊಗುದಾ ಅಥಾವ ಆಸ್ಪತ್ರೆಗೆ ಹೊಗುದ ಗೋತ್ತಾಗುತ್ತಿಲ್ಲ. ಆದರಿಂದ ನಗರ ಸಭೆ ಸರಬರಾಜು ಮಾಡುದ್ದಾರೆ ಶುದ್ದ ನೀರನ್ನು ಸರಬರಾಜು ಮಾಡಲಿ ಇಲ್ಲಾದಿದ್ದಲಿ ನಾವೇ ನೀರನ್ನ ಸರಭರಾಜು ಮಾಡುದಾಗಿ ಅಲ್ಲಿನ ನಿವಾಸಿ ಬಾಸ್ಕರ್ ತಿಳಿಸಿದರು.

Comments are closed.