ಮನೋರಂಜನೆ

ಸುದೀರ್ಘ ‘ಬ್ರೇಕ್’ ಬಳಿಕ ಬಣ್ಣ ಹಚ್ಚಿದ ಪರಿಣೀತಿ ಚೋಪ್ರ !

Pinterest LinkedIn Tumblr

Actor Arjun Kapoor and Actress Parineeti Chopra for the special announcement of Daawat-E- Ishq at Yashraj Studio in Andheri (west) PIC/NIKESH GURAV

ಬಾಲಿವುಡ್ ನಟಿ ಪರಿಣೀತಿ ಚೋಪ್ರ ಮತ್ತೆ ಬಿಜಿಯಾಗಿದ್ದಾರೆ. 2014ರ ‘ಕಿಲ್ ದಿಲ್’ ಬಳಿಕ ಪರಿ ಮತ್ತೆ ಬೆಳ್ಳಿ ತೆರೆಮೇಲೆ ಕಾಣಿಸಿಕೊಂಡಿರಲಿಲ್ಲ. ಈ ಗ್ಯಾಪಲ್ಲಿ ವರ್ಕೌಟ್ ಮಾಡಿ ಬೆವರಿಳಿಸಿ, ರೌಂಡ್ ಫಿಗರ್ನಂತಿದ್ದವರು, ಜೀರೋ ಫಿಗರ್ಗೆ ಹತ್ತಿರವಾಗಿ ಬಿಕಿನಿ ಬಾಡಿ ಮಾಡಿಕೊಂಡು ಕೆಲ ತಿಂಗಳ ಹಿಂದಷ್ಟೇ ಹೊಸ ಫೋಟೋಶೂಟ್ನಲ್ಲಿ ಮಿಂಚಿದ್ದರು. ಜತೆಗೆ ಕೆಲ ದಿನಗಳ ಹಿಂದಷ್ಟೇ ಆಸ್ಟ್ರೇಲಿಯಾ ಪ್ರವಾಸ ಹೋಗಿ, ಚೆನ್ನಾಗಿ ಎಂಜಾಯ್ ಮಾಡಿಕೊಂಡು ವಾಪಸಾಗಿದ್ದರು. ಈಗ ಈ ಸುದೀರ್ಘ ಬ್ರೇಕ್ನಿಂದ ‘ಬ್ರೇಕ್’ ಪಡೆದಿರುವ ಪರಿ, ಮತ್ತೆ ಕೆಲಸದತ್ತ ಗಮನ ಹರಿಸಿದ್ದಾರೆ.

ಕೊಲ್ಕತ್ತದಲ್ಲಿ ಗುರುವಾರದಿಂದ ‘ಮೇರಿ ಪ್ಯಾರಿ ಬಿಂದು’ ಚಿತ್ರದ ಶೂಟಿಂಗ್ ಶುರುವಾಗಿದ್ದು, ಒಂದೂವರೆ ವರ್ಷದ ಬಳಿಕ ಮತ್ತೆ ಬಣ್ಣ ಹಚ್ಚಿರುವ ಪರಿ ಫುಲ್ ದಿಲ್ ಖುಷ್ ಆಗಿ ಟ್ವೀಟಿಸಿಕೊಂಡಿದ್ದಾರೆ. ಮನೀಶ್ ರಾಯ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನಾಗೆ ಜೋಡಿಯಾಗಿದ್ದಾರೆ ಅವರು. ಇದರ ಬೆನ್ನಲ್ಲೇ ರೋಹಿತ್ ಧವನ್ ನಿರ್ದೇಶಿಸುತ್ತಿರುವ ಆಕ್ಷನ್ ಸಿನಿಮಾ ‘ಡಿಶೂಂ’ನಲ್ಲೂ ಪರಿಣೀತಿ ಐಟಂ ಸಾಂಗ್ ಒಂದಕ್ಕೆ ಸೊಂಟ ಬಳುಕಿಸಲಿದ್ದಾರಂತೆ. ಜಾನ್ ಅಬ್ರಹಾಂ, ವರುಣ್ ಧವನ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರಕ್ಕೆ ಜಾಕ್ಲೀನ್ ಫರ್ನಾಂಡಿಸ್ ನಾಯಕಿ. ಪರಿ ಸಾಂಗ್ಗಾಗಿಯೇ ಮುಂಬೈನಲ್ಲಿ ಸ್ಪೆಷಲ್ ಸೆಟ್ ಒಂದನ್ನು ನಿರ್ವಿುಸಲಾಗುತ್ತಿದ್ದು, ಎರಡು ದಿನಗಳ ಕಾಲ ಈ ಹಾಡಿನ ಚಿತ್ರೀಕರಣ ನಡೆಯಲಿದೆಯಂತೆ.

Write A Comment