ಮನೋರಂಜನೆ

ಬ್ಯಾಚುಲರ್ ಬಾಯ್ ಸಲ್ಮಾನ್ ಖಾನ್ ವಿವಾಹ ವಿವಾದ ! ಕತ್ರಿನಾ-ಡೈಸಿ ಶಾ ನಟಿಮಣಿಯರ ಅಡ್ಡಗಾಲು… ?

Pinterest LinkedIn Tumblr

daisy-shah-katrina-kaif-salman-khan

ನಟ ಸಲ್ಮಾನ್ ಖಾನ್ ಈಗ ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಆದರೆ ವಿವಾದದಿಂದಲ್ಲ. ಬದಲಾಗಿ, ವಿವಾಹ ಕಾರಣಕ್ಕೆ! ಸದ್ಯ ಮೂಲಗಳು ಹೇಳವಂತೆ, 50 ದಾಟಿದ ಬಳಿಕ ಮದುವೆಗೆ ಮನಸ್ಸು ಮಾಡಿದ್ದಾರಂತೆ ಸಲ್ಲು. ರೊಮೇನಿಯಾ ಬ್ಯೂಟಿ ಲುಲಿಯಾ ವಂಟುರ್ ಜತೆ ಇದೇ ವರ್ಷಾಂತ್ಯಕ್ಕೆ ಸಪ್ತಪದಿ ತುಳಿಯಲಿದ್ದಾರೆ ಎನ್ನಲಾಗುತ್ತಿದೆ. ಇಲ್ಲೇ ‘ಕಹಾನಿ ಮೆ ಟ್ವಿಸ್ಟ್’

ಇರೋದು. ಇದಕ್ಕೆ ಒಬ್ಬರಲ್ಲ, ಇಬ್ಬರು ನಟಿಮಣಿಯರು ಅಡ್ಡಗಾಲು ಹಾಕಿದ್ದಾರಂತೆ! ಒಂದೆಡೆ ರಣಬೀರ್ ಕಪೂರ್ನಿಂದ ದೂರಾಗಿ, ಸಾಲು ಸೋಲುಗಳಿಂದ ಬೇಸತ್ತಿರುವ ಕತ್ರಿನಾ ಮತ್ತೆ ಸಲ್ಮಾನ್ ಖಾನ್ ಬಳಿ ಸಹಾಯ ಕೋರಿ ಬಂದಿದ್ದಾರೆ. ಹೀಗಾಗಿಯೇ ಮನೆಗೆ ಬಂದ ‘ಮಾಜಿ’ ಪ್ರೇಯಸಿಯನ್ನು ಮನಬಿಚ್ಚಿ ಅಪ್ಪಿಕೊಂಡಿರುವ ಸಲ್ಮಾನ್, ಅವರ ಸಹಾಯಕ್ಕೆ ನಿಂತಿದ್ದಾರೆ ಎಂಬ ಮಾತಿದೆ.

ಇದು ‘ಹಾಲಿ’ ಪ್ರೇಯಸಿ ಲುಲಿಯಾಗೆ ಎಲ್ಲಿ ‘ಭವಿಷ್ಯದ ಪತಿರಾಯ’ ಕೈತಪ್ಪಿ ಹೋಗುತ್ತಾನೋ ಎಂಬ ಆತಂಕ ಮೂಡಿಸಿದೆಯಂತೆ. ಮತ್ತೊಂದೆಡೆ ‘ಜೈ ಹೋ’ ಚಿತ್ರದಲ್ಲಿ ಸಲ್ಮಾನ್ಗೆ ಜೋಡಿಯಾಗಿದ್ದ ಡೈಸಿ ಶಾ ಕೂಡ ಸಲ್ಮಾನ್, ಲುಲಿಯಾ ನಡುವೆ ಎಂಟ್ರಿ ಕೊಟ್ಟಿದ್ದಾರಂತೆ. ಕನ್ನಡದಲ್ಲೂ ‘ಬಾಡಿಗಾರ್ಡ್’, ‘ಭದ್ರ’, ‘ಆಕ್ರಮಣ’ ಸೇರಿದಂತೆ ಕೆಲ ಚಿತ್ರಗಳಲ್ಲಿ ನಟಿಸಿರುವ ಡೈಸಿ, ಎಲ್ಲೂ ಅವಕಾಶಗಳಿಲ್ಲದ ಕಾರಣ ಸದ್ಯ ಸಲ್ಮಾನ್ ಗ್ಯಾಂಗ್ ಸೇರಿಕೊಂಡಿದ್ದಾರೆ.

ಕೆಲ ತಿಂಗಳ ಹಿಂದೆ ಲುಲಿಯಾ ಮತ್ತು ಡೈಸಿ ನಡುವೆ ಯಾವುದೋ ವಿಷಯಕ್ಕೆ ಜಗಳವಾಗಿದ್ದು, ಆಗ ಸಲ್ಮಾನ್ ಸಪೋರ್ಟ್ ಡೈಸಿ ಕಡೆಗಿತ್ತು ಎಂಬ ಮಾತು ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಅದನ್ನು ಸುಳ್ಳು ಎಂದು ಅಲ್ಲಗಳೆದಿರುವ ಡೈಸಿ, ‘ನಾನು ಮದುವೆಗೆ ವಿರುದ್ಧ. ಹೀಗಾಗಿಯೇ ನನ್ನ ಗೆಳೆಯರೂ ಮದುವೆಯಾಗಬಾರದು ಅನ್ನೋದು ನನ್ನಾಸೆ’ ಎಂದು ಬಾಂಬ್ ಸಿಡಿಸಿದ್ದಾರೆ. ಹಾಗಾದರೆ ಲುಲಿಯಾ ಹಾಗೂ ಸಲ್ಮಾನ್ ನಡುವೆ, ಕತ್ರಿನಾ ಕತ್ತರಿ ಪ್ರಯೋಗ ಮಾಡುತ್ತಿದ್ದಾರಾ? ಡೈಸಿ ಮಚ್ಚು ಮಸಿಯುತ್ತಿದ್ದಾರಾ? ಗೊತ್ತಿಲ್ಲ! ಧೂಮ್ 4ರಲ್ಲಿ ಸಲ್ಮಾನ್ ಕಳ್ಳ.

ಈಗಾಗಲೇ ಭರ್ಜರಿಯಾಗಿ ಮೂರು ಪಾರ್ಟ್ ಗಳಲ್ಲಿ ‘ಧೂಮ್ ಚಿತ್ರವನ್ನು ತೆರೆಗೆ ತಂದಿರುವ ಯಶ್ ರಾಜ್ ಸಂಸ್ಥೆ, ನಾಲ್ಕನೇ ಭಾಗಕ್ಕೆ ಅಣಿಯಾಗುತ್ತಿದೆ. ಇದೀಗ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಸಲ್ಮಾನ್ ಖಾನ್ ಕಳ್ಳನಾಗಿ ನಟಿಸೋದು ಪಕ್ಕಾ ಅಂತೆ. ಅಲ್ಲದೆ, ಅವರ ಜತೆಗೆ ರಣವೀರ್ ಸಿಂಗ್ ಕೂಡ ಇರುತ್ತಾರೆ ಅನ್ನೋದು ಲೇಟೆಸ್ಟ್ ನ್ಯೂಸ್! ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಭಿಷೇಕ್ ಬಚ್ಚನ್ ಮತ್ತು ಉದಯ್ ಚೋಪ್ರ ಕೂಡ ನಾಪತ್ತೆಯಾಗಲಿದ್ದಾರಂತೆ. ಅವರ ಜಾಗಕ್ಕೆ ಈಗ ರಣವೀರ್ ಎಂಟ್ರಿಯಾಗಿರೋದು ಎನ್ನಲಾಗುತ್ತಿದೆ. ಇನ್ನು, ಈ ನಾಲ್ಕರ ಸರಣಿಗೆ ‘ಧೂಮ್ ರಿ-ಲೋಡೆಡ್’ ಎಂದು ಹೆಸರಿಡಲಾಗಿದ್ದು, 2017ರಲ್ಲಿ ಶೂಟಿಂಗ್ ಶುರುವಾಗುವ ಸಾಧ್ಯತೆ ಇದೆ. ಅಷ್ಟಕ್ಕೂ ಈ ಸುದ್ದಿ ಹುಟ್ಟಿಕೊಳ್ಳಲು ಕಾರಣವೇನು? ಯಶ್ ರಾಜ್ ಬ್ಯಾನರ್ನಲ್ಲಿ ನಿರ್ವಣವಾಗುತ್ತಿರುವ ‘ಸುಲ್ತಾನ್’ ಮತ್ತು ‘ಬೆಫಿಕ್ರೆ’ ಚಿತ್ರಗಳಲ್ಲಿ ಕ್ರಮವಾಗಿ ಸಲ್ಮಾನ್ ಮತ್ತು ರಣವೀರ್ ನಾಯಕ ನಟರು. ಹಾಗಾಗಿ, ಈ ಥರದ್ದೊಂದು ಸುದ್ದಿಗೆ ರೆಕ್ಕೆ ಪುಕ್ಕ ಸೃಷ್ಟಿಯಾಗಿರಬೇಕು!

Write A Comment