ಮನೋರಂಜನೆ

ಜಯದ ಹಾದಿಗೆ ಗುಜರಾತ್‌ ಲಯನ್ಸ್‌: ನೈಟ್‌ರೈಡರ್ಸ್‌ಗೆ ನಿರಾಸೆ

Pinterest LinkedIn Tumblr

dinesh-karthik

ಕೋಲ್ಕತ್ತ: ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ದಿನೇಶ್‌ ಕಾರ್ತಿಕ್‌ (51; 29ಎ, 8ಬೌಂ, 1ಸಿ) ಅವರ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಗುಜರಾತ್‌ ಲಯನ್ಸ್‌ ತಂಡ ಐಪಿಎಲ್‌ ಟೂರ್ನಿಯ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಕೋಲ್ಕತ್ತ ನೈಟ್‌ರೈಡರ್ಸ್‌ ತಂಡವನ್ನು ಮಣಿಸಿದೆ.

ಇದರೊಂದಿಗೆ ಸುರೇಶ್‌ ರೈನಾ ಬಳಗ 11 ಪಂದ್ಯಗಳಿಂದ 14 ಪಾಯಿಂಟ್ಸ್‌ ಕಲೆಹಾಕಿ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಭಾನುವಾರ ಮೊದಲು ಬ್ಯಾಟ್‌ ಮಾಡುವ ಅವಕಾಶ ಪಡೆದ ಆತಿಥೇಯ ನೈಟ್‌ರೈಡರ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 158ರನ್‌ ಪೇರಿಸಿತು.ಸವಾಲಿನ ಗುರಿಯನ್ನು ಲಯನ್ಸ್‌ 18 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಸಂಕ್ಷಿಪ್ತ ಸ್ಕೋರು: ಕೋಲ್ಕತ್ತ ನೈಟ್ ರೈಡರ್ಸ್ : 20 ಓವರ್‌ಗಳಲ್ಲಿ 4 ವಿಕೆಟ್‌ಗೆ 158 (ರಾಬಿನ್ ಉತ್ತಪ್ಪ 14, ಶಕೀಬ್ ಅಲ್ ಹಸನ್ ಔಟಾಗದೆ 66, ಯೂಸುಫ್ ಪಠಾಣ್ ಔಟಾಗದೆ 63, ಪ್ರವೀಣ್‌ ಕುಮಾರ್‌ 19ಕ್ಕೆ2, ಧವಳ್ ಕುಲಕರ್ಣಿ 30ಕ್ಕೆ1, ಡ್ವೇನ್ ಸ್ಮಿತ್ 14ಕ್ಕೆ1).

ಗುಜರಾತ್‌ ಲಯನ್ಸ್‌: 18 ಓವರ್‌ಗಳಲ್ಲಿ 5 ವಿಕೆಟ್‌ಗೆ 164 (ಡ್ವೇನ್‌ ಸ್ಮಿತ್‌ 27, ಬ್ರೆಂಡನ್‌ ಮೆಕ್ಲಮ್‌ 29, ದಿನೇಶ್‌ ಕಾರ್ತಿಕ್‌ 51, ಆ್ಯರನ್‌ ಫಿಂಚ್‌ 29; ಬ್ರಾಡ್‌ ಹಾಗ್‌ 19ಕ್ಕೆ1, ಆ್ಯಂಡ್ರೆ ರಸೆಲ್‌ 21ಕ್ಕೆ1).

ಫಲಿತಾಂಶ: ಗುಜರಾತ್‌ ಲಯನ್ಸ್‌ಗೆ 5 ವಿಕೆಟ್‌ ಗೆಲುವು.
ಪಂದ್ಯಶ್ರೇಷ್ಠ: ಪ್ರವೀಣ್‌ ಕುಮಾರ್‌.

Write A Comment