ರಾಷ್ಟ್ರೀಯ

ಮಲ್ಯ ಚೌಕಾಸಿ ತಿರಸ್ಕರಿಸಿದ ಬ್ಯಾಂಕುಗಳ ಒಕ್ಕೂಟ: ಒಟ್ಟು ಆಸ್ತಿ ಬಹಿರಂಗಕ್ಕೆ ಮಲ್ಯಗೆ ಸುಪ್ರೀಂ ಸೂಚನೆ

Pinterest LinkedIn Tumblr

Mallyaನವದೆಹಲಿ (ಪಿಟಿಐ): ಸಾಲ ಮರುಪಾವತಿ ಸಂಬಂಧ ಚೌಕಾಸಿಗೆ ಇಳಿದಿದ್ದ ಉದ್ಯಮಿ ವಿಜಯ್ ಮಲ್ಯ ಅವರ ಪ್ರಸ್ತಾವವನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ ನೇತೃತ್ವದ 17 ಬ್ಯಾಂಕುಗಳ ಒಕ್ಕೂಟ ಗುರುವಾರ ತಿರಸ್ಕರಿಸಿದೆ.
ಮತ್ತೊಂದೆಡೆ, ಏಪ್ರಿಲ್ 21ರ ವೇಳೆಗೆ ಒಟ್ಟು ಆಸ್ತಿಯನ್ನು ಘೋಷಿಸುವಂತೆ ಮಲ್ಯಗೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.
₹ 9,000 ಕೋಟಿಗೂ ಅಧಿಕ ಸಾಲ ಬಾಕಿ ಉಳಿಸಿಕೊಂಡಿರುವ ಮಲ್ಯ ₹ 4,000 ಕೋಟಿ ಮೊತ್ತವನ್ನು ಇದೇ ವರ್ಷದ ಸೆಪ್ಟೆಂಬರ್‌ ವೇಳೆಗೆ ಪಾವತಿ ಮಾಡುವ ಪ್ರಸ್ತಾವವನ್ನು ಸುಪ್ರೀಂಕೋರ್ಟ್‌ ಮೂಲಕ ಬ್ಯಾಂಕುಗಳ ಮುಂದಿಟ್ಟಿದ್ದರು. ಇದಕ್ಕೆ ಗುರುವಾರ ಪ್ರತಿಕ್ರಿಯಿಸಿದ ಬ್ಯಾಂಕುಗಳ ಒಕ್ಕೂಟವು ಮಲ್ಯ ಪ್ರಸ್ತಾವವನ್ನು ತಳ್ಳಿಹಾಕಿದೆ.
ಅಲ್ಲದೇ, ಸಾಲ ಮರುಪಾವತಿ ಬಗ್ಗೆ ಗಂಭೀರವಾಗಿರುವ ಕುರಿತು ಮಲ್ಯ ಅವರು ಸ್ವದೇಶಕ್ಕೆ ವಾಪಸ್ಸಾಗುವ ಮೂಲಕ ಪ್ರಾಮಾಣಿಕತೆ ಸಾಬೀತು ಪಡಿಸಲು ನಿರ್ದೇಶನ ನೀಡುವಂತೆ ಬ್ಯಾಂಕುಗಳ ಒಕ್ಕೂಟ ಕೋರಿತು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್ ಹಾಗೂ ಆರ್‌.ಎಫ್‌.ನಾರಿಮನ್ ಅವರಿದ್ಧ ಪೀಠ, ಪ್ರಾಮಾಣಿಕತೆ ಸಾಬೀತಿಗೆ ಮಲ್ಯ ಹಾಗೂ ಅವರ ಕಂಪೆನಿಗಳು ನ್ಯಾಯಾಲಯದಲ್ಲಿ ಎಷ್ಟು ಹಣ ಠೇವಣಿ ಇಡಬಲ್ಲಿರಿ ಎಂಬುದನ್ನು ಏಪ್ರಿಲ್ 21ರ ಒಳಗೆ ಮಾಹಿತಿ ನೀಡುವಂತೆ ಸೂಚಿಸಿತು.
20 ನಿಮಿಷಗಳ ಸಂಕ್ಷಿಪ್ತ ವಿಚಾರಣೆಯ ಬಳಿಕ ವಿಚಾರಣೆಯನ್ನು ನ್ಯಾಯಾಲಯ ಏಪ್ರಿಲ್‌ 26ಕ್ಕೆ ಮುಂದೂಡಿತು.

Write A Comment