ಅಂತರಾಷ್ಟ್ರೀಯ

ಅಮೆರಿಕ ವಲಸಿಗರ ರಾಷ್ಟ್ರ: ಮಿಷೆಲ್ ಒಬಾಮ

Pinterest LinkedIn Tumblr

Michelle-Obamaವಾಷಿಂಗ್ಟನ್(ಪಿಟಿಐ): ಚುನಾವಣಾ ಪ್ರಚಾರದಲ್ಲಿ ಉಪಯೋಗಿಸುತ್ತಿರುವ ಭಾಷಾ ಬಳಕೆಯ ಕುರಿತು ಟೀಕಿಸಿರುವ ಅಮೆರಿಕ ಅಧ್ಯಕ್ಷರ ಬರಾಕ್ ಒಬಾಮ ಅವರ ಪತ್ನಿ ಮಿಷೆಲ್ ಒಬಾಮ, ಅಮೆರಿಕ ‘ವಲಸಿಗರ ದೇಶ’ವಾಗಿದ್ದು, ವೈವಿಧ್ಯವೇ ಯಾವಾಗಲೂ ಅದರ ಬಲವಾಗಿರುತ್ತದೆ ಎಂದು ಪ್ರತಿಪಾದಿಸಿದ್ದಾರೆ.
ಶ್ವೇತಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಿಷೆಲ್ ಅವರು ಮಾತನಾಡಿದ್ದಾರೆ.
‘ಪ್ರಸ್ತುತ ಗಲಾಟೆ ಎಬ್ಬಿಸುವ ಹಾಗೂ ದ್ವೇಷಮಯವಾದ ಭಾಷಣವನ್ನು ನಾವು ಕೇಳುತ್ತಿದ್ದೇವೆ. ವೈವಿಧ್ಯವೇ ಅಮೆರಿಕ ಸಾಮರ್ಥ್ಯದ ಸೆಲೆಯಾಗಿತ್ತು ಮತ್ತು ಮುಂದೆಯೂ ಆಗಿರಲಿದೆ ಎಂಬುದನ್ನು ಈ ಸಮಯದಲ್ಲಿ ಸ್ಮರಿಸುವುದು ತುಂಬ ಮುಖ್ಯ’ ಎಂದಿದ್ದಾರೆ.
‘ನಮ್ಮದು ವಲಸಿಗರ ರಾಷ್ಟ್ರ. ಅವರಿಂದ ಪ್ರಾಪ್ತವಾದ ಸುಂದರ ಸಂಪ್ರದಾಯಗಳು, ಸಂಸ್ಕೃತಿಗಳು, ಪ್ರತಿಭೆ ಹಾಗೂ ಬಲವನ್ನು ನಾವು ಪೋಷಿಸಬೇಕು. ಬರೀ ಇಂದು ಮಾತ್ರವೇ ಅಲ್ಲ ನಿತ್ಯವೂ’ ಎಂದು ಅವರು ಅಭಿಪ್ರಾಯ ಪಟ್ಟರು.

Write A Comment