ರಾಷ್ಟ್ರೀಯ

ಸೈನಾ ನೆಹ್ವಾಲ್ ,ರವಿಶಂಕರ್ ಗುರೂಜಿ ಸೇರಿ 56 ಗಣ್ಯರಿಗೆ ಪದ್ಮ ಪುರಸ್ಕಾರ ಪ್ರದಾನ

Pinterest LinkedIn Tumblr

padma-new

ನವದೆಹಲಿ: ಆಧ್ಯಾತ್ಮ ಗುರು ಶ್ರೀ ರವಿಶಂಕರ್ ಗುರೂಜಿ ಸೇರಿದಂತೆ ದೇಶದ 56 ಗಣ್ಯರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಭವನದಲ್ಲಿ ಪದ್ಮ ಪುರಸ್ಕಾರ ಪ್ರದಾನ ಮಾಡಿದರು.

ಪ್ರಶಸ್ತಿ ಸ್ವೀಕರಿಸಿರುವ ಗಣ್ಯರಲ್ಲಿ ಪದ್ಮ ವಿಭೂಷಣ ಗೌರವಕ್ಕೆ ಪಾತ್ರರಾದ ಧೀರೂಬಾಯಿ ಅಂಬಾನಿ (ಮರಣೋತ್ತರ), ಜಮ್ಮು ಕಾಶ್ಮೀರ ಮಾಜಿ ರಾಜ್ಯಪಾಲ ಜಗಮೋಹನ್, ಆಧ್ಯಾತ್ಮ ಗುರು ಶ್ರೀ ರವಿಶಂಕರ್‌ ಗುರೂಜಿ, ಪದ್ಮಭೂಷಣ ಗೌರವಕ್ಕೆ ಪಾತ್ರರಾಗಿರುವ ಬಾಲಿವುಟ್‌ ನಟ ಅನುಪಮ್‌ ಖೇರ್‌, ನಿರ್ದೇಶಕ ರಾಜಮೌಳಿ, ಅಜಯ್‌ ದೇವಗನ್‌, ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹ್ವಾಲ್‌, ವಿನೋದ್‌ ರಾಯ್‌, ಪದ್ಮಶ್ರೀ ಗೌರವಕ್ಕೆ ಪಾತ್ರರಾದ ಇಸ್ರೋದ ಎಂ. ಅಣ್ಣಾದೊರೈ ಅವರನ್ನು ಪುರಸ್ಕರಿಸಲಾಗಿದೆ.

ಈ ಬಾರಿ ಒಟ್ಟು 112 ಗಣ್ಯರಿಗೆ ಪದ್ಮ ಪುರಸ್ಕಾರಗಳನ್ನು ಪ್ರಕಟಿಸಲಾಗಿತ್ತು. ಈ ಪೈಕಿ 56 ಗಣ್ಯರಿಗೆ ಪದ್ಮ ಪುರಸ್ಕಾರ ಮಾಡಲಾಗಿದ್ದು, ಇನ್ನುಳಿದ 56 ಗಣ್ಯರಿಗೆ ಮುಂದಿನ ತಿಂಗಳು ಪದ್ಮ ಪ್ರಶಸ್ತಿ ಪ್ರದಾನ ನಡೆಯಲಿದೆ. ಪದ್ಮ ಪುರಸ್ಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಿರಿಯ ನಾಯಕ ಎಲ್‌.ಕೆ ಅಡ್ವಾಣಿ ಉಪಸ್ಥಿತರಿದ್ದರು.

Write A Comment