ಕರ್ನಾಟಕ

ಸಿಲಿಕಾನ್ ಸಿಟಿಯಲ್ಲಿ 1500 ಕಿ.ಮೀ ರಸ್ತೆ ಅಭಿವೃದ್ಧಿ: ಬಿಬಿಎಂಪಿ ಬಜೆಟ್ ಮುಖ್ಯಾಂಶಗಳು

Pinterest LinkedIn Tumblr

BBMP-fi

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಕೂಟದ ಮೊದಲ ಬಜೆಟ್ ಸೋಮವಾರ ಮಂಡನೆಯಾಗಿದ್ದು, 8,994.41 ಕೋಟಿ ರುಪಾಯಿ ಗಾತ್ರದ ಬಜೆಟ್ ಮಂಡಿಸಲಾಗಿದೆ. ಮಹಾನಗರ ಪಾಲಿಕೆ ಇತಿಹಾಸದಲ್ಲೇ ದಾಖಲೆ ಮೊತ್ತದ ಬಜೆಟ್ ಇದಾಗಿದೆ.

ಇಂದು ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಶಿವರಾಜು ಅವರು 2016-17ನೇ ಸಾಲಿನ ಬಜೆಟ್ ಮಂಡಿಸಿದರು.

ಬಜೆಟ್ ಮುಖ್ಯಾಂಶಗಳು:
1500 ಕಿ ಮೀಟರ್ ರಸ್ತೆ ಅಭಿವೃದ್ದಿಗೆ ಬಿಬಿಎಂಪಿ ಪ್ಲ್ಯಾನ್
ಆಯ್ದ ಸ್ಥಳಗಳಲ್ಲಿ ವೈಫೈ, ಸಂಪೂರ್ಣ ಆನ್ ಲೈನ್ ವ್ಯವಸ್ಥೆ
2 ಲಕ್ಷ ಗಿಡಗಳನ್ನು ನೆಡಲು 6 ಕೋಟಿ ಮೀಸಲು
ಅಲ್ಪಸಂಖ್ಯಾತರಿಗೆ ಪ್ರತಿ ವಾರ್ಡ್ ಗೆ 118 ಕೋಟಿ ರೂ. ಮೀಸಲು
ಹೊಸದಾಗಿ ಪಾರ್ಕ್ ನಿರ್ಮಾಣಕ್ಕೆ 40 ಕೋಟಿ ಅನುದಾನ
ಜಾನ್ಸನ್ ಮಾರುಕಟ್ಟೆ ಅಭಿವೃದ್ಧಿಗೆ 10 ಕೋಟಿ
ತೋಟಗಾರಿಕೆ ಅರಣ್ಯೀಕರಣಕ್ಕೆ 153 ಕೋಟಿ ಅನುದಾನ
ವೇತನ ಪಿಂಚಣಿ ವಿಭಾಗಕ್ಕೆ 661 ಕೋಟಿ ಅನುದಾನ
ಬೆಂಗಳೂರಿನ ಕಸ ವಿಲೇವಾರಿಗಾಗಿ 636 ಕೋಟಿ
1958 ಕೋಟಿ ಮೂಲ ಸೌಕರ್ಯ ಅಭಿವೃದ್ಧಿಗೆ
2,445 ಕೋಟಿ ಪ್ರಸಕ್ತ ಸಾಲಿನ ಆದಾಯದ ಗುರಿ
ಬಿಬಿಎಂಪಿ ಆಡಳಿತಾತ್ಮಕ ವೆಚ್ಚ 241 ಕೋಟಿ
ಆರೋಗ್ಯ ಮತ್ತು ಶಿಕ್ಷಣ ಇಲಾಖೆಗೆ 59 ಕೋಟಿ
ಸರ್ಕಾರಿ ಅನುದಾನಿತ ಕಾಮಗಾರಿಗಳಿಗೆ 3,771 ಕೋಟಿ
ಸರ್ಕಾರದಿಂದ 4,235 ಕೋಟಿ ರೂಪಾಯಿ ಅನುದಾನ ನಿರೀಕ್ಷೆ
ಡಾ.ಅಂಬೇಡ್ಕರ್ ಜಯಂತಿ ಆಚರಣೆಗೆ 1 ಕೋಟಿ
ಮಹಿಳಾ ಸದಸ್ಯರಿರುವ ವಾರ್ಡ್ ಗೆ 10 ಲಕ್ಷ ರೂ. ಮೀಸಲು
ಸಂಧ್ಯಾ ಕುಟೀರ ಯೋಜನೆಗೆ 3 ಕೋಟಿ ರೂ ಮೀಸಲು
ಆರ್ಥಿಕ ಸ್ವಾವಲಂಬಿ ಯೋಜನೆಗೆ 2 ಕೋಟಿ ರೂ.
ಮಂಗಳಮುಖಿಯರ ಅಭಿವೃದ್ಧಿಗೆ 2 ಕೋಟಿ ರೂಪಾಯಿ
ಮಿನರ್ವ ವೃತ್ತದಿಂದ ಟೌನ್ ಹಾಲ್ ವರೆಗೆ ಉಕ್ಕಿನ ಸೇತುವೆ
ರಸ್ತೆ ಸಂಪರ್ಕಕ್ಕಾಗಿ 50 ಕೋಟಿ ರೂ. ವೆಚ್ಚದಲ್ಲಿ ಪ್ಲೈ ಓವರ್
ಹಿರಿಯ ನಾಗರಿಕರಿಗೆ ಮಧ್ಯಾಹ್ನ ಬಿಸಿಯೂಟದ ಯೋಜನೆಗೆ 4 ಕೋಟಿ
300 ಕಿಲೋ ಮೀಟರ್ ಸಿಮೆಂಟ್ ರಸ್ತೆ ನಿರ್ಮಾಣ
ಆನ್ ಲೈನ್ ಮೂಲಕ ಜಾಹೀರಾತು ಟೆಂಡರ್
ಹಿಂದುಳಿದ ವರ್ಗ/ ಪಂಗಡಕ್ಕೆ ನಮ್ಮ ಮನೆ ಯೋಜನೆ ಜಾರಿಗೆ, ಪ್ರತಿ ವಾರ್ಡ್ ನಲ್ಲಿ 30 ಮನೆ.

Write A Comment