ಕರ್ನಾಟಕ

ಜೂನ್. 17 : ಬಿಜೆಪಿ ದಕ್ಷಿಣ ಕನ್ನಡ ವತಿಯಿಂದ ಬೃಹತ್ ವಾಹನ ಜಾಥಾ ಹಾಗೂ ವಿಜಯೋತ್ಸವ ಕಾರ್ಯಕ್ರಮ.

Pinterest LinkedIn Tumblr

ಮಂಗಳೂರು, ಜೂ.16 : ದಕ್ಷಿಣ ಕನ್ನಡದ ಸಂಸದರಾಗಿ ಅಭೂತಪೂರ್ವಜಯ ದಾಖಲಿಸಿದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಭಾರತೀಯ ಜನತಾ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಅಭಿನಂದನೆ ಹಾಗೂ ಕಾರ್ಯಕರ್ತರ ವಿಜಯೋತ್ಸವ ಕಾರ್ಯಕ್ರಮ ನಾಳೆ ದಿನಾಂಕ 17.6.2024 ರಂದು ಸಂಜೆ 4.30ಕ್ಕೆ ನಗರದ ಕುದ್ಮಲ್ ರಂಗರಾವ್ ಪುರ ಭವನದಲ್ಲಿ ಅದ್ದೂರಿಯಾಗಿ ನಡೆಯಲಿದೆ.

ಇದೇ ಸಂದರ್ಭದಲ್ಲಿ ಉಡುಪಿ ಚಿಕ್ಕಮಂಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ವಿಧಾನ ಪರಿಷತ್ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಚುನಾಯಿತರಾದ ಡಾ| ಧನಂಜಯ ಸರ್ಜಿ, ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ವಿಧಾನ ಪರಿಷತ್ತಿಗೆ ಚುನಾಯಿತರಾದ ಎಸ್ ಎಲ್ ಭೋಜೇಗೌಡ ಹಾಗೂ ಬಿಜೆಪಿ ಕಾರ್ಯಕರ್ತ ಬಂಧುಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಅಭಿನಂದನ ಸಮಾರಂಭಕ್ಕೆ ಮುನ್ನ ಸಂಜೆ 3.30ಕ್ಕೆ ನಗರದ ಬಂಟ್ಸ್ ಹಾಸ್ಟೆಲ್ ವೃತ್ತದಿಂದ ಪುರಭವನದ ತನಕ ಬೃಹತ್ ವಾಹನ ಜಾಥ ನಡೆಯಲಿದ್ದು ವಿಜಯೋತ್ಸವ ಕಾರ್ಯಕ್ರಮ ಇನ್ನಷ್ಟು ಮೆರುಗನ್ನು ನೀಡಲಿದೆ.

ಈ ವಿಜಯೋತ್ಸವದ ಅಭಿನಂದನಾ ಸಮಾರಂಭ ಮತ್ತು ವಾಹನ ಜಾಥದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವಂತೆ ಬಿಜೆಪಿ ಜಿಲ್ಲಾ ಸಮಿತಿಯು ಪ್ರಕಟಣೆಯ ಮೂಲಕ ವಿನಂತಿಸಿದೆ.

Comments are closed.