ರಾಷ್ಟ್ರೀಯ

ಮುಸ್ಲಿಂ ಮದುವೇಲಿ ಇನ್ಮುಂದೆ ಬ್ಯಾಂಡ್‌-ಬಾಜಾ, ನಾಚ್‌-ಗಾನಾ ಇರಲ್ಲ !

Pinterest LinkedIn Tumblr

Muslim-Wedding-700ಲಕ್ನೋ : ಉತ್ತರ ಪ್ರದೇಶದ ಮೌಲ್ವಿಗಳ ಅಪ್ಪಣೆ ಪ್ರಕಾರ ಇನ್ನು ಮುಂದೆ ಮುಸ್ಲಿಂ ಮದುವೆಗಳಲ್ಲಿ ಬ್ಯಾಂಡ್‌-ಬಾಜಾ, ನಾಚ್‌-ಗಾನಾ ಇರುವುದಿಲ್ಲ !

ಮುಸ್ಲಿಂ ಮದುವೆಗಳಲ್ಲಿ ಹಣವನ್ನು ನೀರಿನಂತೆ ಖರ್ಚು ಮಾಡಲಾಗುತ್ತಿರುವುದನ್ನು ತಡೆಯುವ ಪ್ರಯತ್ನವಾಗಿ ಉತ್ತರ ಪ್ರದೇಶದ ಸಹಾರನ್‌ಪುರದ ಮೌಲ್ವಿಗಳು ತಾವಿನ್ನು ಬ್ಯಾಂಡ್‌ ಬಾಜಾ, ನಾಚ್‌ ಗಾನಾ ಇರುವ ಅಬ್ಬರದ ಮದುವೆಗಳನ್ನು ನಡೆಸಿಕೊಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಡೆಕ್ಕನ್‌ ಕ್ರಾನಿಕಲ್‌ ವರದಿ ಮಾಡಿದೆ.

ಹಿರಿಯ ಮೌಲ್ವಿ ಮೌಲಾನಾ ಕಾರಿ ಸೈಯದ್‌ ಇಷಾಕ್‌ ಅವರ ಅಧ್ಯಕ್ಷತೆಯಲ್ಲಿ ಸಹಾರನ್‌ಪುರದಲ್ಲಿ ನಡೆದ ಮೌಲ್ವಿಗಳ ಸಭೆಯಲ್ಲಿ “ಮುಸ್ಲಿ ಮದುವೆಗಳಲ್ಲಿ ಬ್ಯಾಂಡ್‌ ಬಾಜಾ, ನಾಚ್‌ ಗಾನಾ’ ಇರಕೂಡದು ಎಂಬ ಸರ್ವಾನುಮತದ ನಿರ್ಧಾರವನ್ನು ಕೈಗೊಳ್ಳಲಾಯಿತೆಂದು ವರದಿ ತಿಳಿಸಿದೆ.

ಮುಸ್ಲಿಂ ಮದುವೆಗಳಲ್ಲಿ ಬ್ಯಾಂಡ್‌ ಬಾಜಾ, ನಾಚ್‌ ಗಾನಾ, ಹಾಡು ಕುಣಿತ, ವರದಕ್ಷಿಣೆ ಇತ್ಯಾದಿಗಳಿರುವುದು ಇಸ್ಲಾಂ ಗೆ ವಿರುದ್ಧವಾಗಿದೆ; ಆದುದರಿಂದ ಇವುಗಳನ್ನು ತಡೆಯುವ ಅಗತ್ಯವಿದೆ ಎಂದು ಸಭೆಯಲ್ಲಿ ಒಮ್ಮತದಿಂದ ಅಭಿಪ್ರಾಯಪಡಲಾಯಿತು. ಮುಸ್ಲಿಂ ಮದುವೆಗಳನ್ನು ಅಬ್ಬರದಿಂದ, ವಿಪರೀತ ಹಣ ಖರ್ಚು ಮಾಡುವ ಮೂಲಕ ನಡೆಸುವುದಕ್ಕೆ ಇಸ್ಲಾಂ ನಲ್ಲಿ ಅವಕಾಶವಿಲ್ಲ ಎಂದು ಮೌಲ್ವಿಗಳು ಹೇಳಿದರು.
-ಉದಯವಾಣಿ

Write A Comment