ರಾಷ್ಟ್ರೀಯ

ಸೆಲ್ಫಿ ಕ್ಲಿಕ್ಕಿಸುವಾಗ ಪ್ರಪಾತಕ್ಕೆ ಜಾರಿದ 5 ಪ್ರವಾಸಿಗರು

Pinterest LinkedIn Tumblr

selfiಪಣಜಿ: ಸೆಲ್ಫಿ ತೆಗೆದುಕೊಳ್ಳುವಾಗ ಸಂಭವಿಸುವ ಅನಾಹುತಗಳ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ, ಹಲವರು ಸೆಲ್ಫಿ ತೆಗೆದುಕೊಳ್ಳುವಾಗ ಜೀವ ಕಳೆದುಕೊಂಡಿದ್ದೂ ಇದೆ. ಗೋವಾದಲ್ಲಿ ಪ್ರವಾಸಕ್ಕಾಗಿ ಆಗಮಿಸಿದ್ದ ಐವರು ಪ್ರವಾಸಿಗರು ಸೆಲ್ಫಿ ತೆಗೆದುಕೊಳ್ಳುವಾಗ ಪ್ರಪಾತಕ್ಕೆ ಜಾರಿ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಫೆಬ್ರವರಿ 22 ರಂದು ಗೋವಾದ ಅಂಜುನಾ ಗ್ರಾಮದ ಬಳಿ ಇರು ಬಂಡೆ ಕಲ್ಲಿನ ಮೇಲೆ ನಿಂತು ಸೆಲ್ಪಿ ತೆಗೆದುಕೊಳ್ಳುತ್ತಿದ್ದಾಗ ಇಬ್ಬರು ಮಹಿಳೆಯರು ಸೇರಿ 5 ಜನರು ಕೆಳಗೆ ಉರುಳಿ ಬಿದ್ದಿದ್ದರು. ಬಂಡೆಯಿಂದ ಜಾರಿ ಬಿದ್ದ ಪ್ರವಾಸಿಗರ ಪೈಕಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment