ರಾಷ್ಟ್ರೀಯ

ಸುನಂದಾ ಪುಷ್ಕರ್ ಸಾವಿನ ಹಿಂದೆ ಮೋಸವಿಲ್ಲ: ಶಶಿ ತರೂರ್

Pinterest LinkedIn Tumblr

sunanda-shashiನವದೆಹಲಿ: ಸುನಂದಾ ಪುಷ್ಕರ್ ಸಾವಿನ ಪ್ರಕರಣ ಕುರಿತಂತೆ ಅವರ ಪತಿ ಮಾಜಿ ಸಚಿವ ಶಶಿ ತರೂರ್ ಅವರನ್ನು ದೆಹಲಿ ಪೊಲೀಸರ ವಿಶೇಷ ತನಿಖಾಧಿಕಾರಿಗಳ ತಂಡ ನಿನ್ನೆ ಸುಮಾರು 5 ಗಂಟೆಗಳ ಕಾಲ ವಿಚಾರಣೆ ನಡೆಸಿತು.

ಸುನಂದಾ ಪುಷ್ಕರ್ ಸಾವಿನ ಪ್ರಕರಣದಲ್ಲಿ ಯಾವುದೇ ರೀತಿಯ ಅನ್ಯಾಯ ವಾಗಿಲ್ಲ ಎಂದು ಶಶಿ ತರೂರ್ ತನಿಖೆಯುದ್ದಕ್ಕೂ ಹೇಳಿದ್ದು, ಅವರು ಡ್ರಗ್ಸ್ ಸೇವನೆಯಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.ಸುನಂದಾ ಅವರು ಸೇವಿಸಿದ ಔಷಧಿಗಳು ಮತ್ತು ಅವುಗಳನ್ನು ಯಾರು ಖರೀದಿಸಿದ್ದರು ಎಂಬ ಕುರಿತು ಪೊಲೀಸರು ಪ್ರಶ್ನಿಸಿದ್ದಾರೆ.

ಶಶಿ ತರೂರ್ ಅವರು ಸುನಂದಾರನ್ನು 2010ರಲ್ಲಿ ಮದುವೆಯಾಗಿದ್ದರು. 2014 ಜನವರಿ 17ರಂದು ದೆಹಲಿಯ ಹೊಟೇಲೊಂದರ ಕೊಠಡಿಯೊಂದರಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ್ದರು.

ತರೂರ್ ಅವರನ್ನು ಮುಂದಿನ ವಾರಗಳಲ್ಲಿ ಸುಳ್ಳು ಪತ್ತೆ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆಯಿದ್ದು, ಇದಕ್ಕಾಗಿ ತನಿಖಾಧಿಕಾರಿಗಳು ಕೋರ್ಟ್ ನ ಅನುಪತಿ ಪಡೆಯಬೇಕಾದ ಸಾಧ್ಯತೆಗಳಿವೆ.

ಈ ಮುಂಚೆ ಪ್ರತಿಕ್ರಿಯಿಸಿದ್ದ ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ, ಸುನಂದಾ ಪುಷ್ಕರ್ ಅವರ ಸಾವು ಸಹಜವಲ್ಲ. ನಾವು ನಡೆಸಿದ ತನಿಖೆ ಪ್ರಕಾರ ಸಾವು ಅಸಹಜವಾಗಿದೆ ಎಂದು ಖಂಡಿತವಾಗಿಯೂ ಹೇಳುತ್ತೇವೆ. ಅದಕ್ಕೆ ಸಂಬಂಧಪಟ್ಟ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ಜನವರಿಯಲ್ಲಿ ಸುನಂದಾ ಅವರ ಸಾವಿನ ಕುರಿತಂತೆ ದೆಹಲಿ ಪೊಲೀಸರು ಕೊಲೆ ಪ್ರಕರಣವೊಂದನ್ನು ದಾಖಲಿಸಿದ್ದರು. ವಿಷಸೇವನೆಯಿಂದ ಸಾವು ಸಂಭವಿಸಿದೆ ಎಂದು ಅಖಿಲ ಭಾರತ ವೈದ್ಯಕೀಯ ಮಂಡಳಿ ವರದಿ ನೀಡಿದ್ದು, ಸುನಂದಾ ಅವರ ಒಳಾಂಗಗಳ ಮಾದರಿಯ ಸ್ಯಾಂಪಲ್ ನ್ನು ಪರೀಕ್ಷೆಗೆ ವಾಷಿಂಗ್ಟನ್ ನ ಪ್ರಯೋಗಾಲಯಕ್ಕೆ ಪೊಲೀಸರು ಕಳುಹಿಸಿದ್ದರು.

Write A Comment