ನಿರ್ದೇಶಕ ಸಂತೋಷ್ ಆನಂದರಾಮ್ ಹಾಗೂ ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ ರಾಜಕುಮಾರ ಚಿತ್ರಕ್ಕೆ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರಿಯಾ ಆನಂದ್ ಸೆಲೆಕ್ಟ್ ಆಗಿದ್ದಾರೆ.
ನಮ್ಮ ಚಿತ್ರದಲ್ಲಿ ದಕ್ಷಿಣ ಭಾರತದ ಸಂಪ್ರದಾಯದ ಹುಡುಗಿಯಾಗಿ ಹಾಗೂ ಎನ್ಆರ್ಐ ಆಗಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುವಂತಾ ಪಾತ್ರ ಪೋಷಣೆಗೆ ಪ್ರಿಯಾ ಆನಂದ್ ಸೂಕ್ತ ಎಂದು ಬಾವಿಸಿ ಆಕೆಯನ್ನು ಆಯ್ಕೆ ಮಾಡಲಾಗಿದೆ ಎಂದು ಹೊಂಬಾಳೆ ಕ್ರಿಯೆಷನ್ಸ್ ತಂಡ ಹೇಳಿದೆ.
ಇನ್ನು ಶ್ರೀದೇವಿಯ ಕಂಬ್ಯಾಕ್ ಚಿತ್ರ ‘ಇಂಗ್ಲಿಷ್ ವಿಂಗ್ಲಿಷ್’ನಲ್ಲಿ ಪ್ರಿಯಾ ಆನಂದ್ ಮಾಡಿದ್ದ ಸಹನಟಿಯ ರೋಲ್ ಕೂಡ ಸಾಕಷ್ಟು ಸುದ್ದಿ ಮಾಡಿತ್ತು. ಲೀಡರ್, 180, ವಾಮನನ್ ಮುಂತಾದ ಚಿತ್ರಗಳ ಮೂಲಕ ಪ್ರಿಯಾ ಆನಂದ್ ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರೇಕ್ಷಕರಿಗೆ ಪರಿಚಿತರಾಗಿದ್ದಾರೆ.
ಈಗ ರಾಜಕುಮಾರ ಮೂಲಕ ಕನ್ನಡಕ್ಕೂ ಬರಲಿದ್ದಾರೆ ಈ ಚೆಲುವೆ. ರಾಜಕುಮಾರ ಶೂಟಿಂಗ್ ಇನ್ನೇನು ಶುರುವಾಗಲಿದ್ದು ಪ್ರಿಯಾ ಆನಂದ್ ಚಿತ್ರತಂಡವನ್ನು ಸೇರಲಿದ್ದಾರೆ.