ನವದೆಹಲಿ: ಆಭರಣ ಮಾರಾಟಗಾರರ ಬೇಡಿಕೆ ಕುಸಿತದಿಂದ ಚಿನಿವಾರ ಪೇಟೆಯಲ್ಲಿ ಚಿನ್ನದ ದರವು ರು.600 ಕುಸಿದು ಪ್ರತಿ 10 ಗ್ರಾಂ.ಗಳಿಗೆ ರು.29,050ಕ್ಕೆ ಮುಟ್ಟಿದೆ.
ಚಿನಿವಾರ ಪೇಟೆಯ ಶನಿವಾರದ ವಹಿವಾಟಿನಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂ ಗೆ ರು.29,050 ಯಾಗಿದ್ದು, ಇದರೊಂದಿಗೆ 21 ತಿಂಗಳ ಗರಿಷ್ಠ ಹಂತದಿಂದ ಕಡಿಮೆಯಾಗಿದೆ.
ಜಾಗತಿಕ ಮಾರುಕಟ್ಟೆಗಳಲ್ಲಿನ ನೀರಸ ವಹಿವಾಟು ಮತ್ತು ಆಭರಣ ತಯಾರಕರು ಸಹ ಹೆಚ್ಚು ಖರೀದಿಗೆ ಮುಂದಾಗದಿದ್ದರಿಂದ ಈ ನಷ್ಟ ಕಂಡಿದೆ. ಇದರೊಂದಿಗೆ ಸತತ ಹನ್ನೊಂದು ದಿನಗಳ ಏರಿಕೆಗೆ ತಡೆ ಬಿದ್ದಾಂತಾಗಿದೆ.
ಬೆಳ್ಳಿ ದರಗಳು ಸಹ ಪ್ರತಿ ಕೆಜಿಗೆ ರು.50 ಕಡಿಮೆಯಾಗಿ ರು.37,800ಕ್ಕೆ ತಲುಪಿದೆ.