ರಾಷ್ಟ್ರೀಯ

ದೋಸೆ ಇನ್ನೂ ತುಟ್ಟಿಯಾಗಿರಲು ‘ಕಾವಲಿಗೆ’ ಕಾರಣ..!: ಆರ್​ಬಿಐ ಗವರ್ನರ್ ರಘುರಾಮ್ ರಾಜನ್ ವಿಶ್ಲೇಷಣೆ

Pinterest LinkedIn Tumblr

raj-finalಕೊಚ್ಚಿ: ಹಣದುಬ್ಬರದ ಮೇಲೆ ‘ವಿಜಯ’ ಸಾಧಿಸಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರತಿಪಾದಿಸುತ್ತಿದ್ದರೂ, ಎಲ್ಲರಿಗೂ ಇಷ್ಟವಾದ ದಕ್ಷಿಣ ಭಾರತದ ‘ದೋಸೆ’ ಇನ್ನೂ ತುಟ್ಟಿಯಾಗಿಯೇ ಇದೆಯಲ್ಲ ಏಕೆ? ಆರ್​ಬಿಐ ಗವರ್ನರ್ ರಘುರಾಮ್ ಅವರು ಇದಕ್ಕೆ ‘ಕಾವಲಿಗೆ’ (ತವಾ) ಕಾರಣ ಎಂದು ದೂರುತ್ತಾರೆ.

‘ದೋಸೆ ತಯಾರು ಮಾಡುವವರಿಗೆ ಉನ್ನತ ವೇತನ ನೀಡುತ್ತಿದ್ದರೂ ಸಾಂಪ್ರದಾಯಿಕ ಕಾವಲಿಗೆಯಲ್ಲಿ ದೋಸೆ ಮಾಡುವ ತಂತ್ರಜ್ಞಾನ , ಬದಲಾಗಿಲ್ಲ, ಮೇಲ್ದರ್ಜೆಗೆ ಏರಿಲ್ಲ, ಹೀಗಾಗಿ ದೋಸೆ ಬೆಲೆ ತಗ್ಗಿಲ’ ಎಂದು ರಘುರಾಮ್ ಹೇಳಿದ್ದಾರೆ.

‘ಈಗಲೂ ದೋಸೆ ಮಾಡುವವನು ಹಿಟ್ಟನ್ನು ಕಾವಲಿಗೆಗೆ ಹಾಕುತ್ತಾನೆ, ಅದನ್ನು ಹರಡುತ್ತಾನೆ, ಅದನ್ನು ಬೇಯಿಸಿ ದೋಸೆ ತಯಾರಿಸುತ್ತಾನೆ, ಸರಿಯಷ್ಟೆ. ಇಲ್ಲಿ ತಂತ್ರಜ್ಞಾನ ಸುಧಾರಣೆಯಾಗಿಲ್ಲ. ಆದರೆ ಪ್ರತಿಸಲ ವೇತನ ಏರಿಕೆಯಾದಾಗಲೂ ದೋಸೆ ಮಾಡುವವನ ವೇತನ ಜಾಸ್ತಿಯಾಗುತ್ತಲೇ ಹೋಗುತ್ತದೆ’ ಎಂದು ರಾಜನ್ ವಿವರಿಸಿದ್ದಾರೆ.

ಶನಿವಾರ ರಾತ್ರಿ ಇಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ‘ದೋಸೆ ಪ್ರಿಯ’ ವಿದ್ಯಾರ್ಥಿನಿಯೊಬ್ಬರು ರಘುರಾಮ್ ರಾಜನ್​ಗೆ ಈ ಪ್ರಶ್ನೆ ಕೇಳಿದ್ದರು. ‘ವಾಸ್ತವ ಜಗತ್ತಿನಲ್ಲಿ ದೋಸೆಯ ಬೆಲೆಗಳ ಬಗ್ಗೆ ನನ್ನ ಪ್ರಶ್ನೆ ಇದೆ. ಹಣದುಬ್ಬರ ದರ ಹೆಚ್ಚಿದಂತೆಲ್ಲಾ ದೋಸೆಯ ಬೆಲೆ ಏರುತ್ತದೆ, ಆದರೆ ಹಣದುಬ್ಬರ ದರ ಇಳಿದರೆ, ದೋಸೆ ಬೆಲೆ ಇಳಿಯುವುದಿಲ್ಲ, ನನ್ನ ಪ್ರೀತಿಯ ದೋಸೆಗೆ ಏನಾಗುತ್ತಿದೆ, ಸರ್?’ ಎಂದು ಆಕೆ ಪ್ರಶ್ನಿಸಿದ್ದರು. ‘ಬ್ಯಾಂಕಿಂಗ್, ಕಾರ್ಖಾನೆಗಳಲ್ಲಿ ಸಾಮಾನ್ಯ ಸಿಬ್ಬಂದಿಯೂ ಈಗ ತಂತ್ರಜ್ಞಾನ ಬದಲಾವಣೆ ಪರಿಣಾಮ ಎಷ್ಟೊಂದು ಬಗೆಯ ಸೇವೆ ನೀಡುತ್ತಿದ್ದಾರೆ ನೋಡಿ’ ಎಂದೂ ರಾಜನ್ ಉದಾಹರಣೆ ನೀಡಿದರು.

Write A Comment