ರಾಷ್ಟ್ರೀಯ

ಬಿಜೆಪಿ-ಪಿಡಿಪಿ ಮೈತ್ರಿ ಅಸ್ತಿತ್ವದಲ್ಲಿದ್ದರೆ ಸರ್ಕಾರ ಏಕೆ ಅಸ್ತಿತ್ವದಲ್ಲಿಲ್ಲ?: ಓಮರ್ ಅಬ್ದುಲ್ಲಾ

Pinterest LinkedIn Tumblr

Omar-Abdullahಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಬಿಜೆಪಿ ಮೈತ್ರಿ ಅಸ್ತಿತ್ವದ ಬಗ್ಗೆ ಪ್ರಶ್ನಿಸಿರುವ ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ, ಜಮ್ಮು-ಕಾಶ್ಮೀರದ ಸರ್ಕಾರದ ಬಗ್ಗೆ ಶೀಘ್ರವೇ ನಿರ್ಧಾರ ಕೈಗೊಳ್ಳಬೇಕೆಂದು ಹೇಳಿದ್ದಾರೆ.

ಅಗತ್ಯ ಬಹುಮತವಿದ್ದರೂ ಜಮ್ಮು-ಕಾಶ್ಮೀರದಲ್ಲಿ ಪುನಃ ಸರ್ಕಾರ ರಚಿಸಲು ಬಿಜೆಪಿ- ಪಿಡಿಪಿ ಏಕೆ ಮುಂದಾಗುತ್ತಿಲ್ಲ? ಬಿಜೆಪಿ- ಪಿಡಿಪಿ ಮೈತ್ರಿ ಇರುವುದೇ ಆದರೆ ಸರ್ಕಾರವೇಕೆ ಅಸ್ತಿತ್ವದಲ್ಲಿಲ್ಲ ಎಂದು ಓಮರ್ ಅಬ್ದುಲ್ಲಾ ಪ್ರಶ್ನಿಸಿರುವುದನ್ನು ಎಎನ್ಐ ವರದಿ ಮಾಡಿದೆ.

ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಮುಫ್ತಿ ಮೊಹಮ್ಮದ್ ಸಯೀದ್ ನಿಧನರಾದ ಬಳಿಕ ಕಣಿವೆ ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಜಾರಿಗೆ ಬಂದಿದ್ದು ಪಿಡಿಪಿ- ಬಿಜೆಪಿ ಮೈತ್ರಿ ಸರ್ಕಾರ ನೂತನ ಮುಖ್ಯಮಂತ್ರಿ ಆಯ್ಕೆ ಮೂಲಕ ಪುನಃ ಸರ್ಕಾರ ರಚಿಸಬೇಕಾಗಿದೆ.

Write A Comment