ರಾಷ್ಟ್ರೀಯ

ಘೋರ ಪಾತಕ: 28 ದಿನಗಳ ಹಸುಳೆ ಮೇಲೂ ಅತ್ಯಾಚಾರ!

Pinterest LinkedIn Tumblr

hasuಬುಲಂದಶಹರ್: ಕಾಮಾಂಧ ಕೀಚಕರು ಪುಟ್ಟ ಮಕ್ಕಳನ್ನು ತಮ್ಮ ಕಾಮ ತೃಷೆಗೆ ಬಳಸಿಕೊಳ್ಳುತ್ತಿರುವುದು ವ್ಯಾಪಕವಾಗಿ ಬಿಟ್ಟಿದೆ. ಆದರೆ ಉತ್ತರ ಪ್ರದೇಶದ ಬುಲಂದ್‌ಶಹರ್‌ ಜಿಲ್ಲೆಯಲ್ಲಿ ನಡೆದಿರುವ ಈ ಘಟನೆ ಸಂಪೂರ್ಣ ದೇಶವನ್ನು ಬೆಚ್ಚಿ ಬೀಳಿಸಿದೆ. ಜಿಲ್ಲೆಯ ಅಸಿಫ್ ನಗ್ಲಾ ಎಂಬ ಗ್ರಾಮದಲ್ಲಿ 28 ದಿನಗಳ ಶಿಶುವಿನ ಮೇಲೆ ಅತ್ಯಾಚಾರವನ್ನು ಎಸಗಲಾಗಿದೆ.

ಶನಿವಾರ ಈ ಕರಾಳ ಘಟನೆ ನಡೆದಿದ್ದು, ದುರ್ಘಟನೆ ನಡೆದ ಸಂದರ್ಭದಲ್ಲಿ ಮಗುವೊಂದೇ ಮನೆಯಲ್ಲಿತ್ತು ಎಂದು ತಿಳಿದು ಬಂದಿದೆ.

ಶಿಶುವಿನ ಪೋಷಕರು ಗ್ರಾಮ ಪಂಚಾಯತಿ ಚುನಾವಣೆಗೆ ಮತದಾನ ಮಾಡಲು ಹೋಗಿದ್ದಾಗ, ಮಗುವೊಂದೇ ಮನೆಯಲ್ಲಿ ಇದ್ದುದನ್ನು ಗಮನಿಸಿದ 25 ವರ್ಷದ ನಮಿನೊ ಎನ್ನುವ ಕಾಮ ಪಿಶಾಚಿ ಮನೆಗೆ ನುಗ್ಗಿ ಎಳೆ ಕಂದಮ್ಮನ ಮೇಲೆ ಅತ್ಯಾಚಾರ ಎಸಗಿ ಪರಾರಿಯಾಗಿದ್ದಾನೆ ಎಂದು  ಜಿಲ್ಲಾ ಪೊಲೀಸ್ ಅಧೀಕ್ಷಕರಾದ  ಪಂಕಜ್ ಪಾಂಡೆ ತಿಳಿಸಿದ್ದಾರೆ.

ಕೆಸ ಸಮಯದ ನಂತರ ಪೋಷಕರು ಮನೆಗೆ ಹಿಂತಿರುಗುತ್ತಿದ್ದಾಗ ಮಗುವಿನ ಗುಪ್ತಾಂಗದಲ್ಲಿ ತೀವ್ರ ರಕ್ತಸ್ರಾವವಾಗುತ್ತಿದ್ದು ತಕ್ಷಣ ಅದನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಮಗುವಿನ ಸ್ಥಿತಿ ಗಂಭೀರವಾಗಿರುವುದರಿಂದ ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ವರ್ಗಾಯಿಸಿದ್ದಾರೆ.

Write A Comment