ರಾಷ್ಟ್ರೀಯ

ಬಸ್ ಮೇಲೆ ಉಗ್ರರ ದಾಳಿ: 6 ಯೋಧರಿಗೆ ಗಾಯ

Pinterest LinkedIn Tumblr

ugraಶ್ರೀನಗರ: ಕಣಿವೆನಾಡಿನಲ್ಲಿ ಉಗ್ರರ ಉಪಟಳ ಮುಂದುವರೆದಿದ್ದು ಅನಂತ್‌ನಾಗ್‌ ಜಿಲ್ಲೆಯ ಶ್ರೀನಗರ–ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಿಗ್ಗೆ ಸಿಆರ್‌ಪಿಎಫ್ ಯೋಧರಿದ್ದ ಬಸ್ ಮೇಲೆ ಗ್ರೆನೇಡ್‌ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆಗೆ ಸೇರಿದ 6 ಮಂದಿ ಯೋಧರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು . ಕೆಲವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಅವರನ್ನು ಶ್ರೀನಗರದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

ಶ್ರೀನಗರ್ -ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಸ್ಥಾನ್‌ ಸಮೀಪದ ಗ್ರೀನ್‌ ಟನಲ್‌ ಬಳಿ ಸಾಗುತ್ತಿದ್ದ  ಸಿಆರ್‌ಪಿಎಫ್‌ ಬಸ್ ಮೇಲೆ ಎಕೆ47  ರೈಫಲ್ಸ್‌ನಿಂದ  ಉಗ್ರರು ಏಕಾಏಕಿ ದಾಳಿ ನಡೆಸಿದರು. ಶ್ರೀನಗರದಿಂದ 50 ಕೀಲೋಮೀಟರ್ ದೂರದಲ್ಲಿ ಈ ದಾಳಿ ನಡೆದಿದೆ.

ಸ್ಥಳದಲ್ಲಿ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದ್ದು, ಅಡಗಿರುವ ದಾಳಿಕೋರರ ಪತ್ತೆಗೆ ಬಲೆ ಬೀಸಲಾಗಿದೆ.

ಕಳೆದ ತಿಂಗಳು ಪಂಪೊರ್‌ನ ದ್ರಂಗ್‌ಬಲ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಉಗ್ರರು ಸಿಆರ್‌ಪಿಎಫ್ ತುಕಡಿ ಮೇಲೆ ದಾಳಿ ನಡೆಸಿದ್ದ ಉಗ್ರರು ಇಬ್ಬರು ಯೋಧರು ಮತ್ತು ಇಬ್ಬರು ನಾಗರಿಕರನ್ನು ಗಾಯಗೊಳಿಸಿದ್ದರು.

Write A Comment