ರಾಷ್ಟ್ರೀಯ

ಆನ್ ಲೈನ್ ವೇಶ್ಯಾವಾಟಿಕೆ ಜಾಲ; ಕೇರಳ ಕಿಸ್ ಆಫ್ ಲವ್ ಆರ್ಗನೈಸರ್ ರಾಹುಲ್ – ಪತ್ನಿ ರೇಶ್ಮಿ ಬಂಧನ

Pinterest LinkedIn Tumblr

rahul-reshmi

ತಿರುವನಂತಪುರ: ಆನ್ ಲೈನ್ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಕೇರಳ ಕಿಸ್ ಆಫ್ ಲವ್ ಕಾರ್ಯಕ್ರಮದ ಸಂಘಟಕರಾದ ರಾಹುಲ್ ಪಶುಪಾಲನ್ ಮತ್ತು ಆತನ ಪತ್ನಿ ರೇಶ್ಮಿ ಆರ್ ನಾಯರ್ ಅವರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಕೇರಳಾದ್ಯಂತ ಆನ್ ಲೈನ್ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಆರೋಪದ ಮೇಲೆ ಪೊಲೀಸರು ಇವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆಪರೇಶನ್ ಬಿಗ್ ಡ್ಯಾಡಿ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಎಂಟು ಜೋಡಿಗಳನ್ನು ವಶಕ್ಕೆ ಪಡೆದಿದ್ದಾರೆ. ಇವರಲ್ಲಿ ಅಪ್ರಾಪ್ತರು ಕೂಡ ಇದ್ದಾರೆ ಎಂದು ತಿಳಿದು ಬಂದಿದೆ.

ಬಂಧನಕ್ಕೆ ಒಳಗಾದ ರೇಶ್ಮಿ ಕಳೆದ 2014 ರಲ್ಲಿ ಸದ್ದು ಮಾಡಿದ್ದ ‘ಕಿಸ್ ಆಫ್ ಲವ್’ ಅಭಿಯಾನದಲ್ಲಿ ಕಾಣಿಸಿಕೊಂಡಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯ ಹೆಸರಲ್ಲಿ ಸಾರ್ವಜನಿಕವಾಗಿ ಸಮುದ್ರ ತೀರದಲ್ಲಿ ಚುಂಬಿಸಲು ವೇದಿಕೆ ಸಿದ್ಧಮಾಡಲಾಗಿತ್ತು. ಆದರೆ ಪೊಲೀಸರು ಕಾರ್ಯಕ್ರಮಕ್ಕೆ ತಡೆ ಒಡ್ಡಿದ್ದರು.

Write A Comment