ಕನ್ನಡ ವಾರ್ತೆಗಳು

ರೆಡ್‌ಕ್ರಾಸ್ ಚೇರ್‌ಮೆನ್ ಆಗಿ ಸಿ‌ಎ ಶಾಂತಾರಾಮ ಶೆಟ್ಟಿ ಆಯ್ಕೆ .

Pinterest LinkedIn Tumblr

Redcross_santhram_shetty

ಮಂಗಳೂರು,ನ.18: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಡಳಿತ ಮಂಡಳಿಯ ನೂತನ ಚೇರ್‌ಮೆನ್ ಆಗಿ ಸಿ‌ಎ ಶಾಂತಾರಾಮ ಶೆಟ್ಟಿ ಆಯ್ಕೆಗೊಂಡಿದ್ದಾರೆ.  ದಕ್ಷಿಣ ಕನ್ನಡ ಜಿಲ್ಲಾಕಾರಿ ಕಚೇರಿಯಲ್ಲಿ ಜಿಲ್ಲಾಕಾರಿ ಎ. ಬಿ. ಇಬ್ರಾಹಿಂ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಜಿಲ್ಲಾಘಟಕದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ವೈಸ್‌ಚೇರ್‌ಮೆನ್ ಆಗಿ ಡಾ. ಸುಶೀಲ್ ಜತ್ತಣ್ಣ ಹಾಗೂ ಖಜಾಂಚಿಯಾಗಿ ವಸಂತ್ ಶೆಣೈ ಆಯ್ಕೆಗೊಂಡಿದ್ದಾರೆ. ರೆಡ್‌ಕ್ರಾಸ್ ಜಿಲ್ಲಾಘಟಕದ ಆಡಳಿತ ಮಂಡಳಿಯ ಸದಸ್ಯರ ಆಯ್ಕೆಗಾಗಿ ನಡೆದ ಚುನಾವಣೆಯಲ್ಲಿ ರ್ಸ್ಪಸಿದ ೩೧ಮಂದಿಯಲ್ಲಿ ಅತ್ಯಕ ಮತಗಳಿಂದ ಚುನಾಯಿತರಾಗಿರುವ ಸಿ‌ಎ ಶಾಂತಾರಾಮ ಶೆಟ್ಟಿ ಅವರನ್ನು ಸರ್ವಾನುಮತದಿಂದ ಚೇರ್‌ಮೆನ್ ಆಗಿ ಆಯ್ಕೆ ಮಾಡಲಾಯಿತು.

ಶಾಂತಾರಾಮ ಶೆಟ್ಟಿ ಅವರ ನೇತೃತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ತಂಡದ ಎಲ್ಲಾ೧೦ಮಂದಿ ಸದಸ್ಯರು ಚುನಾಯಿತರಾಗಿರುವುದು ಉಲ್ಲೇಖನೀಯ ವಿಷಯವಾಗಿದೆ. ಶಾಂತಾರಾಮ ಶೆಟ್ಟಿ ಅವರು ರೋಟರಿ ಕ್ಲಬ್ ಮಂಗಳೂರು ಪೂರ್ವದ ಅಧ್ಯಕ್ಷರಾಗಿ,, ಬಂಟ್ಸ್‌ಹಾಸ್ಟೆಲ್ ಶ್ರೀಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿ ಹಾಗೂ ಇತರ ಅನೇಕ ಸೇವಾ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದಾರೆ. ಪ್ರಸಕ್ತ ಮಂಗಳೂರಿನಲ್ಲಿ ಚಾರ್ಟಡ್ ಅಕೌಂಟೆಂಟ್ (ಸಿ‌ಎ) ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Write A Comment