ಅಂತರಾಷ್ಟ್ರೀಯ

ಬಾಂಬ್‌ ಬೆದರಿಕೆ: ಅಮೆರಿಕ–ಫ್ರಾನ್ಸ್‌ 2 ವಿಮಾನಗಳ ಮಾರ್ಗ ಬದಲು

Pinterest LinkedIn Tumblr

Franceweb

ವಾಷಿಂಗ್ಟನ್‌ (ಐಎಎನ್‌ಎಸ್‌): ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಅಮೆರಿಕದಿಂದ ಫ್ರಾನ್ಸ್‌ಗೆ ಬರಬೇಕಿದ್ದ ಏರ್‌ಫ್ರಾನ್ಸ್‌ ಸಂಸ್ಥೆಗೆ ಸೇರಿದ ಎರಡು ವಿಮಾನಗಳು ಮಾರ್ಗ ಬದಲಿಸಿ ಹಾರಾಟ ನಡೆಸಿದವು. ಈ ಎರಡೂ ವಿಮಾನಗಳು ಮಂಗಳವಾರ ತಡರಾತ್ರಿ ಫ್ರಾನ್ಸ್‌ನಲ್ಲಿ ಸುರಕ್ಷಿತವಾಗಿ ಬಂದಿಳಿದಿವೆ ಎಂದು ಸಿಎನ್‌ಎನ್‌ ವರದಿ ಮಾಡಿವೆ.

ಲಾಸ್‌ಏಂಜಲಿಸ್‌ನಿಂದ ಪ್ಯಾರಿಸ್‌ಗೆ ಬರಬೇಕಿದ್ದ ವಿಮಾನ ಸಾಲ್ಟ್‌ ಲೇಕ್‌ ಸಿಟಿ ಮೂಲಕ ಮಾರ್ಗ ಬದಲಿಸಿ ಹಾರಾಟ ನಡೆಸಿತು. ವಾಷಿಂಗ್ಟನ್‌ನಿಂದ ಪ್ಯಾರಿಸ್‌ಗೆ ಬರಬೇಕಿದ್ದ ಇನ್ನೊಂದು ವಿಮಾನ ಹಲಿಫಾಕ್ಸ್‌ ನೊವಾ ಸ್ಕೊಟಿಯಾ ಮೂಲಕ ಪ್ರಯಾಣಿಸಿತು. ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು ಎಂದು ‘ಎಫ್‌ಬಿಐ’ನ ವಿಶೇಷ ಏಜೆಂಟ್‌ ಟಾಡ್‌ ಪ್ಲಾಮರ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

Write A Comment