ರಾಷ್ಟ್ರೀಯ

ಬಿಹಾರ ಸೋಲಿನ ಪರಾಮರ್ಶೆ: ವಿರೋಧ ಪಕ್ಷಗಳು ಒಟ್ಟಾಗಿ ಸ್ಪರ್ಧಿಸಿದ್ದರಿಂದ ಸೋತೆವು; ಜೇಟ್ಲಿ

Pinterest LinkedIn Tumblr

modi-shaನವದೆಹಲಿ: ಬಿಹಾರ ಜನತೆ ನೀಡಿದ ತೀರ್ಪನ್ನು ನಾವು ಗೌರವಿಸುತ್ತೇವೆ. ಬಿಹಾರ ನೂತನ ಸರ್ಕಾರ ಅಭಿವೃದ್ಧಿ ಕೆಲಸ ಮಾಡಲಿದೆ ಎಂಬ ನಿರೀಕ್ಷಿ ಇದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸೋಮವಾರ ಹೇಳಿದ್ದಾರೆ.

ಪಕ್ಷದ ಪ್ರಧಾನಿ ಕಚೇರಿಯಲ್ಲಿ ನಡೆದೆ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಪರಾಮರ್ಶೆ ಮಾಡಲಾಯಿತು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜೇಟ್ಲಿ, 2014ರಲ್ಲಿ ಕಾಂಗ್ರೆಸ್, ಜೆಡಿಯು ಹಾಗೂ ಆರ್‌ಜೆಡಿ ಬೇರೆ ಬೇರೆಯಾಗಿ ಸ್ಪರ್ಧಿಸಿದ್ದವು. ಆಗ ಮಹಾಮೈತ್ರಿಕೂಟ ಇರಲಿಲ್ಲ. ಆದರೆ ಈ ಬಾರಿ ಮೂರೂ ಪಕ್ಷಗಳು ಒಗ್ಗೂಡಿ ಸ್ಪರ್ಧಿಸಿದ್ದರಿಂದ ನಾವು ಸೋಲಬೇಕಾಯಿತು ಎಂದು ಹೇಳಿದರು.

ಇನ್ನು ಇದೇ ವೇಳೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಮೀಸಲಾತಿ ಹೇಳಿಕೆ ಬಗ್ಗೆ ಸ್ಪಷ್ಟನೇ ನೀಡಿದ ಜೇಟ್ಲಿ, ಹೇಳಿಕೆಗಳಿಂದ ಚುನಾವಣೆಯ ಸೋಲು, ಗೆಲವು ನಿರ್ಧಾರವಾಗುವುದಿಲ್ಲ ಎಂದರು.

ಸಂಸದೀಯ ಮಂಡಳಿ ಸಭೆಯಲ್ಲಿ ಬಿಹಾರ ಚುನಾವಣೆ ಸೋಲು ಸೇರಿದಂತೆ ಅಸ್ಸಾಂ, ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯ ಬಗ್ಗೆಯೂ ಚರ್ಚಿಸಲಾಯಿತು ಎಂದು ಜೇಟ್ಲಿ ತಿಳಿಸಿದರು.

ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವರಾದ ಸುಷ್ಮಾ ಸ್ವರಾಜ್, ವೆಂಕಯ್ಯ ನಾಯ್ಡು, ಅನಂತ್ ಕುಮಾರ್ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

Write A Comment