ರಾಷ್ಟ್ರೀಯ

ಅಡ್ವಾಣಿ ಹುಟ್ಟುಹಬ್ಬಕ್ಕೆ ಶುಭಕೋರಿದ ಪ್ರಧಾನಿ ಮೋದಿ

Pinterest LinkedIn Tumblr

modi-advani

ನವದೆಹಲಿ, ನ.8: ಬಿಜೆಪಿ ಹಿರಿಯ ನಾಯಕ, ಉಕ್ಕಿನ ಮನುಷ್ಯ ಲಾಲ್‌ಕೃಷ್ಣ ಅಡ್ವಾಣಿ ಅವರು ಇಂದು 89ನೆ ವಸಂತಕ್ಕೆ ಪಾದಾರ್ಪಣೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಹಿರಿಯ ನಾಯಕನ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು.

ಎಲ್.ಕೆ.ಅಡ್ವಾಣಿ ಅವರು ನಮಗೆಲ್ಲ ಹಿರಿಯರು, ಗುರುಗಳು, ಮಾರ್ಗದರ್ಶಕರು ಆಗಿದ್ದು, ಅವರು ಇನ್ನೂ ನೂರ್ಕಾಲ ಬಾಳಲಿ ಎಂದು ಮೋದಿ ಹಾರೈಸಿದರು. ಈ ದೇಶಕ್ಕೆ ಅಡ್ವಾಣಿ ಅವರು ನೀಡಿರುವ ಕೊಡುಗೆ ಅನನ್ಯ ಎಂದು ಬಣ್ಣಿಸಿದ ಅವರು, ಅವರ ಅನುಭವ, ಜ್ಞಾನಗಳು ನಮಗೆಲ್ಲ ದಾರಿ ದೀಪವಾಗಲಿ. ನಾನು ಮೋದಿಯವರಿಂದ ಬಹಳ ಕಲಿತಿದ್ದೇನೆ. ಅವರೊಬ್ಬ ಒಳ್ಳೆಯ ಗುರು ಎಂದು ಮೋದಿ ಹೇಳಿದ್ದಾರೆ. ಅಡ್ವಾಣಿ ಅವರು 1927ರ ನ.8 ರಂದು ಇಂದಿನ ಪಾಕಿಸ್ತಾನದ ಕರಾಚಿಯಲ್ಲಿ ಜನಿಸಿದವರು.

Write A Comment