ಅಂತರಾಷ್ಟ್ರೀಯ

ಪರೀಕ್ಷೆ ಬರೆಯಲು ತಡವಾಗಬಹುದು ಎಂದು ಬಸ್ಸನ್ನೇ ಕದ್ದ ವಿದ್ಯಾರ್ಥಿ!

Pinterest LinkedIn Tumblr

stud

ಕೇಪ್ಟೌನ್: ಪರೀಕ್ಷೆ ಬರೆಯಲು ತುದಿಗಾಲಲ್ಲಿ ನಿಂತಿದ್ದ ಹೈ ಸ್ಕೂಲ್ ಹುಡುಗನೊಬ್ಬ ಪರೀಕ್ಷೆಗೆ ತಡವಾಗಬಹುದು ಎಂದು ಹೆದರಿ ಬಸ್‍ನನ್ನೇ ಕಳ್ಳತನ ಮಾಡಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ.

ಲೀ ಆನ್ ಅಡೊನಿಸ್ ಎಂಬ ಹೆಸರಿನ ಹುಡುಗ ಎಷ್ಟು ಹೊತ್ತಾದರೂ ಬಸ್‍ನ ಚಾಲಕ ಬರದಿದ್ದ ಕಾರಣ ಪರಿಕ್ಷೆಗೆ ತಡವಾಗಬಹುದು ಎಂದು ಯೋಚಿಸಿ ತಾನೇ ಬಸ್ ಚಾಲನೆ ಮಾಡಿಕೊಂಡು ತನ್ನ ಸ್ನೇಹಿತರನ್ನು ಶಾಲೆಗೆ ಕರೆದುಕೊಂಡು ಹೋಗಿದ್ದಾನೆ.

ಸ್ವಲ್ಪ ದೂರ ಕ್ರಮಿಸುವ ವೇಳೆಗೆ ಬಸ್‍ನನ್ನು ತಡೆದ ಟ್ರಾಫಿಕ್ ಪೊಲೀಸರು ಹುಡುಗನಿಗೆ 361 ಡಾಲರ್ ದಂಡ ವಿಧಿಸಿದ್ದಾರೆ. ನನಗೆ ಬಸ್‍ನಲ್ಲಿ ಚಾಲಕ ಬಿಟ್ಟು ಹೋಗಿದ್ದ ಕೀ ಕಾಣಿಸಿತು. ಅಲ್ಲದೆ ನನ್ನ ಸಹಪಾಠಿಗಳು ಬಸ್ ಓಡಿಸುವಂತೆ ನನ್ನನ್ನು ಉತ್ತೇಜಿಸಿದರು ಎಂದು ಅಡೊನಿಸ್ ಹೇಳಿದ್ದಾನೆ. ಇಷ್ಟಾದ ಮೇಲೂ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಪರಿಕ್ಷಾಕೇಂದ್ರವನ್ನು ತಲುಪಿದ್ದಾರೆ.

Write A Comment