ರಾಷ್ಟ್ರೀಯ

ಬಾಲಕಿಯ ಜೀವವನ್ನೇ ಬಲಿ ಪಡೆಯಿತು ಆ ಫೋನ್ ಕರೆ !

Pinterest LinkedIn Tumblr

suಹತ್ತನೇ ತರಗತಿ ವಿದ್ಯಾರ್ಥಿನಿಯೊಬ್ಬಳು 15 ವರ್ಷದ ಬಾಲಕನ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಇಲ್ಲಿನ ಥಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ ತನ್ನ ಸಂಬಂಧಿಕರ ಮನೆಯಲ್ಲಿದ್ದುಕೊಂಡು 10 ತರಗತಿಯೊಂದಿಗೆ ಕಂಪ್ಯೂಟರ್ ಕೋರ್ಸ್ ಸಹ ಕಲಿಯುತ್ತಿದ್ದಳು. ಈ ಸಮಯದಲ್ಲಿ ಶಹಾಪುರ ತಾಲೂಕಿನ ಯುವಕನೊಬ್ಬ ವಿದ್ಯಾರ್ಥಿನಿಯ ನಂಬರ್ ಪಡೆದು ಕರೆ ಮಾಡಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರಿಂದ ನೊಂದ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದ್ದು  ಈ ಹಿಂದೆ ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಆದರೆ ಈ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿರುವ ಕಾರಣ ಕಿರುಕುಳ ನೀಡಿದ ಬಾಲಕನ ವಿರುದ್ದ ಸೆಕ್ಷನ್ 306 , 507  ಅಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment