ಅಂತರಾಷ್ಟ್ರೀಯ

ಭಾವಿ ಹೆಂಡತಿ ಹೆಸರು ಮರೆತ ಪಾಕಿಸ್ತಾನಿಗೆ 20 ತಿಂಗಳು ಶಿಕ್ಷೆ

Pinterest LinkedIn Tumblr

6728downloadಇದೊಂದು ವಿಚಿತ್ರ ಘಟನೆ. ಭಾವಿ ಹೆಂಡತಿ ಹೆಸರು ಮರೆತಿದ್ದಕ್ಕೆ ಆತ 20 ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗಿದೆ.

ಲಂಡನ್ ನಲ್ಲಿ ಈ ಘಟನೆ ನಡೆದಿದೆ. ಮದುವೆಗೆ ಕೆಲವೇ ಕ್ಷಣಗಳು ಬಾಕಿ ಇರುವ ವೇಳೆ ಭಾವಿ ಪತ್ನಿ ಹೆಸರು ಮರೆತ ಆತನಿಗೆ ಕೋರ್ಟ್ 20 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಮದುವೆ ನೋಂದಣಿ ಕಚೇರಿಗೆ ಬಂದ ಪಾಕಿಸ್ತಾನದ ಯುವಕ ಬ್ರೋಕರ್ ಗೆ ಕರೆ ಮಾಡಿ ತನ್ನ ಪತ್ನಿಯಾಗುವವಳ ಹೆಸರು ಕೇಳಿದ್ದಾನೆ.

ಇದರಿಂದ ಅನುಮಾನಗೊಂಡ ರಿಜಿಸ್ಟ್ರಾರ್ ಮೇಲಾಧಿಕಾರಿಗೆ ವಿಷಯ ತಿಳಿಸಿದ್ದಾನೆ. 28 ವರ್ಷದ ಜುಬೇರ್ ಖಾನ್ ನನ್ನು ವಶಕ್ಕೆ ಪಡೆದ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಆಗ ಸತ್ಯ ಗೊತ್ತಾಗಿದೆ. ಶಿಕ್ಷಣಕ್ಕಾಗಿ ಅಲ್ಲಿಗೆ ಹೋಗಿದ್ದ ಪಾಕಿಸ್ತಾನಿ ಯುವಕನ ವೀಸಾ ಮುಗಿಯುತ್ತ ಬಂದಿತ್ತು. ಅಲ್ಲಿಯೇ ಉಳಿಯಲು ಉಪಾಯ ಹುಡುಕಿದ ಯುವಕ, ಅಲ್ಲಿಯ ಯುವತಿಯನ್ನು ವಿವಾಹವಾಗಲು ಮುಂದಾಗಿದ್ದಾನೆ.

ಕೋರ್ಟ್, ಪಿತೂರಿ ಮದುವೆಗೆ ಮುಂದಾಗಿದ್ದ ಖಾನ್ ಗೆ 20 ತಿಂಗಳು ಹಾಗೂ ಆತನನ್ನು ಮದುವೆಯಾಗಲು ಬಂದಿದ್ದ ಯುವತಿಗೆ 17 ತಿಂಗಳು ಜೈಲು ಮತ್ತು ಬ್ರೋಕರ್ ಗೆ 20 ತಿಂಗಳು ಜೈಲು ಶಿಕ್ಷೆ ವಿಧಿಸಿದೆ.

Write A Comment