ಅಂತರಾಷ್ಟ್ರೀಯ

ಸೆಲ್ಫಿ..! ಕಾಯಿಲೆಗೆ ದಾರಿಯಾಗುತ್ತೆ ಹುಷಾರ್..!!

Pinterest LinkedIn Tumblr

selfಇತ್ತೀಚಿನ ದಿನಗಳಲ್ಲಿ ಸೆಲ್ಫಿ ಗೀಳು ಜಾಸ್ತಿಯಾಗ್ತಾ ಇದೆ. ಫೇಸ್ ಬುಕ್, ವಾಟ್ಸಪ್, ಟ್ವಿಟರ್ ನಲ್ಲಿ ಸೆಲ್ಫಿಯದ್ದೇ ಅಬ್ಬರ. ಆದರೆ ಇದು ಆತಂಕಕ್ಕೆ ಕಾರಣವಾಗ್ತಿದೆ.

ಹಿಂದೆ ಸೆಲೆಬ್ರಿಟಿಗಳಿಂದ ಅಭಿಮಾನಿಗಳು ಆಟೋಗ್ರಾಫ್ ಪಡೆಯುತ್ತಿದ್ದರು. ಆದರೆ ಈಗ ಸೆಲ್ಫಿ ಪಡೆಯುತ್ತಿದ್ದಾರೆ. ಎಷ್ಟರ ಮಟ್ಟಿಗೆ ಎಂದ್ರೆ ಇದು ಅವರ ಖಾಸಗಿ ಜೀವನದ ಮೇಲೂ ಪರಿಣಾಮ ಬೀರುತ್ತಿದೆ.

ಲಂಡನ್ ನ್ ನ ಮನೋವಿಜ್ಞಾನಿಗಳು ಇದರ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದಾರೆ. ಅಧ್ಯಯನದ ಪ್ರಕಾರ ಯುವಕರ ಸೆಲ್ಫಿ ಗೀಳು ಮನೋರೋಗಕ್ಕೆ ದಾರಿಮಾಡಿಕೊಡುತ್ತಿದೆಯಂತೆ. ಇಂಗ್ಲೆಂಡ್ ನ ದೊಡ್ಡ ವ್ಯಾಪಾರಿಯೊಬ್ಬರು ಅವರ ಮಗಳ ಸೆಲ್ಫಿ ಹುಚ್ಚಿಗೆ ತಲೆಕೆಡಿಸಿಕೊಂಡಿದ್ದು, ಮನೋವಿಜ್ಞಾನಿಗಳ ಮೊರೆ ಹೋಗಿದ್ದಾರೆ.

ಅಧ್ಯಯನದ ಪ್ರಕಾರ, ಪ್ರತಿ ವಾರ 1.7 ಕೋಟಿ ಸೆಲ್ಫಿ ಅಪ್ ಲೋಡ್ ಆಗ್ತಾ ಇದೆ. 2014 ರಲ್ಲಿ ಭಾರತದಲ್ಲಿ 1.6 ಕೋಟಿ ಯುವಕರು ಸೆಲ್ಫಿ ಅಪ್ ಲೋಡ್ ಮಾಡಿದ್ದಾರೆ. 2013 ರರವರೆಗೆ 18 ರಿಂದ 24 ವರ್ಷದ ಒಳಗಿನ 3.5 ಕೋಟಿ ಸೆಲ್ಫಿ ಅಪ್ ಲೋಡ್ ಆಗಿತ್ತು. ಶೇಕಡಾ 48 ರಷ್ಟು ಫೇಸ್ ಬುಕ್ ನಲ್ಲಿ, ಶೇಕಡಾ 27 ರಷ್ಟು ವಾಟ್ಸಪ್ ನಲ್ಲಿ, ಶೇಕಡಾ 9 ರಷ್ಟು ಟ್ವಿಟ್ಟರ್ ನಲ್ಲಿ ಸೆಲ್ಫಿ ಅಪ್ ಲೋಡ್ ಆಗ್ತಾ ಇದೆ.

Write A Comment