ಅಂತರಾಷ್ಟ್ರೀಯ

ತನ್ನ ನಕಲಿ ಐಫೋನ್ ಗೆ ತಾನೇ ಬೆಚ್ಚಿ ಬಿದ್ದ ಚೀನಾ !

Pinterest LinkedIn Tumblr

iphoನಕಲಿ ವಸ್ತುಗಳ ಉತ್ಪಾದನೆಗೆ ಕುಖ್ಯಾತಿ ಪಡೆದಿರುವ ಚೀನಾದಲ್ಲಿ ಇದೀಗ ನಕಲಿ ಐಫೋನ್ ಗಳ ಹಾವಳಿ ಹೆಚ್ಚಿದ್ದು ತಮ್ಮವರ ಈ ‘ಸಾಹಸ’ ಕಂಡು ಸ್ವತಃ ಚೀನಾ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.

ಬೀಜಿಂಗ್ ನಲ್ಲಿ ಭಾರಿ ಮೊತ್ತದ ನಕಲಿ ಐಫೋನ್ ತಯಾರಿಕಾ ಜಾಲ ಪತ್ತೆಯಾಗಿದ್ದು ಸರಿ ಸುಮಾರು 40 ಸಾವಿರಕ್ಕೂ ಅಧಿಕ  ಐಫೋನ್ ಗಳನ್ನು ವಶಪಡಿಸಿಕೊಂದ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಅಮೆರಿಕದಲ್ಲಿ ನಕಲಿ ಐಫೋನ್ ಪತ್ತೆಯಾದ ಹಿನ್ನೆಲೆಯಲ್ಲಿ ಚೀನಾದ ಅಧಿಕಾರಿಗಳು ಈ ನಕಲಿ ಜಾಲವನ್ನು ಪತ್ತೆ ಹಚ್ಚಲು ಮುಂದಾಗಿದ್ದರು. ಈ ಸಮಯದಲ್ಲಿ ಹಳೇ ಐಫೋನ್ ಗಳನ್ನು ಖರೀದಿಸಿ, ಇದರಲ್ಲಿನ ಮೇನ್ ಬೋರ್ಡ್ ಅನ್ನು ತೆಗೆದು ಹೊಸ ಅಸೆಂಬಲ್ ಮಾಡಿ ಬೇರೆ ದೇಶಗಳಿಗೆ ಮಾರಾಟ ಮಾಡುತ್ತಿರುವ ಜಾಲವೊಂದನ್ನು ಪತ್ತೆ ಹಚ್ಚಿದ್ದಾರೆ.

ವಿಶೇಷವೆಂದರೆ ಇದೀಗ ಜನರ ಬಳಿ ಇರುವ ಐಫೋನ್ ನಕಲಿಯೋ ಅಸಲಿಯೋ ಎಂದು ತಿಳಿಯುವುದು ಕಷ್ಟವಾಗುವ ಸನ್ನಿವೇಶ ಎದುರಾಗಿದೆ. ಏಕೆಂದರೆ, ಐಫೋನ್ ಗಳ ಹಿಂದೆ ಮೇಡ್ ಇನ್ ಚೀನಾ ಎಂದು ಬರೆದಿರುವುದರಿಂದ ಅಧಿಕಾರಿಗಳೇ ಗೊಂದಲದಲ್ಲಿದ್ದಾರಂತೆ.

Write A Comment