ರಾಷ್ಟ್ರೀಯ

ಉತ್ತರಾಖಾಂಡ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ 300 ಯಾತ್ರಿಗಳು

Pinterest LinkedIn Tumblr

utta

ಉತ್ತರಾಖಾಂಡ್, ಜೂ. 27: ಉತ್ತರಖಾಂಡ್‌ನ ಬದರಿನಾಥ, ಕೇದಾರನಾಥ ದರ್ಶನಕ್ಕೆ ತೆರಳಿದ್ದ ರಾಜ್ಯದ 300 ಮಂದಿ ಒಳಗೊಂಡಂತೆ ಬೆಂಗಳೂರಿನ 45 ಯಾತ್ರಾರ್ಥಿಗಳು ಪ್ರವಾಹ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಒಂದು ವಾರದಿಂದ ಹಿಮಾಲಯದ ತಪ್ಪಲಿನಲ್ಲಿ ಭಾರೀ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ನದಿಗಳೆಲ್ಲ ಉಕ್ಕಿ ಹರಿಯುತ್ತಿರುವ ಪರಿಣಾಮ ಪ್ರವಾಹ ಉಂಟಾಗಿದ್ದು, ಜೂನ್ 24 ರಂದು ಯಾತ್ರೆಗೆಂದು ತೆರಳಿದ್ದ ಇವರು ಪ್ರವಾಹದಲ್ಲಿ ಸಿಕ್ಕಿಹಾಕಿಕೊಂಡಿದ್ದು ಆಹಾರ, ವಸತಿ ಮತ್ತು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆಗಳೆಲ್ಲ ಪ್ರವಾಹದಿಂದ ಕೊಚ್ಚಿ ಹೋಗಿದ್ದು, ಮರಳಿ ತಮ್ಮ ತಾಯ್ನಾಡಿಗೆ ಹಿಂದಿರುಗಲೂ ಆಗದೆ ಕಣಿವೆಗಳಲ್ಲಿ ಟೆಂಟ್‌ಗಳನ್ನು ನಿರ್ಮಿಸಿ ತಮ್ಮ ಮಕ್ಕಳ ಜೊತೆ ಮೂಲ ಸೌಕರ್ಯಗಳಿಲ್ಲದೆ ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ.

uttarkand

Write A Comment