ರಾಷ್ಟ್ರೀಯ

ದೇಶವಾಸಿಗಳಿಗೆ ರಂಜಾನ್ ಶುಭಾಶಯ ಕೋರಿದ ಪ್ರಧಾನಿ ಮೋದಿ

Pinterest LinkedIn Tumblr

mo

ನವದೆಹಲಿ: ಇಂದಿನಿಂದ ಪವಿತ್ರ  ರಂಜಾನ್ ಮಾಸಾಚರಣೆ ಪ್ರಾರಂಭವಾದ  ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ರಂಜಾನ್‌ ಶುಭಾಶಯ ಕೋರಿದ್ದಾರೆ.

ಸಾಮಾಜಿಕ ತಾಣ ಟ್ವಿಟರ್ ಮೂಲಕ ಶುಭ ಸಂದೇಶ ನೀಡಿರುವ ಪ್ರಧಾನಿ ಮೋದಿ, “ಎಲ್ಲರ ಜೀವನದಲ್ಲಿ ಸುಖ ಶಾಂತಿ ನೆಲಸಲಿ ಸಮಾಜದಲ್ಲಿ ಸಾಮರಸ್ಯ , ಒಗ್ಗಟ್ಟು ಹೆಚ್ಚಾಗಲಿ. ಎಲ್ಲರಿಗೂ ಪವಿತ್ರ ರಂಜಾನ್ ಮಾಸದ  ಹಾರ್ದಿಕ ಶುಭಾಶಯಗಳು”, ಎಂದು ಟ್ವೀಟ್ ಮಾಡಿದ್ದಾರೆ.

ಇಸ್ಲಾಮ್ ಕ್ಯಾಲೆಂಡರ್‌ನ ಪ್ರಕಾರ ರಂಜಾನ್ ವರ್ಷದ ಒಂಬತ್ತನೇ ತಿಂಗಳು. ಇಸ್ಲಾಂನ ನಾಲ್ಕನೆಯ ಕಡ್ಡಾಯ ಕರ್ಮ ರಮದಾನ್ ತಿಂಗಳ ಸಂಪೂರ್ಣ ವ್ರತಾಚರಣೆಯಾಗಿದೆ. ಮಾನವಕಲ್ಯಾಣಕ್ಕಾಗಿ ಪ್ರವಾದಿ ಮಹಮ್ಮದ್  ಇದೇ ತಿಂಗಳಲ್ಲಿ ಪವಿತ್ರ ಕುರಾನ್ ರಚಿಸಿದರು ಎಂಬುದು ಮುಸ್ಲಿಂ ಸಮುದಾಯದವರ ನಂಬಿಕೆಯಾಗಿದ್ದು ಇದರ ಗೌರವಾರ್ಹ ಪ್ರತಿವರ್ಷವೂ ಮುಸ್ಲಿಂ ಬಾಂಧವರು ಒಂದು ತಿಂಗಳ ವ್ರತಾಚರಣೆಯನ್ನು ಕೈಗೊಳ್ಳುತ್ತಾರೆ.

Write A Comment