ಅಂತರಾಷ್ಟ್ರೀಯ

ರಂಜಾನ್‌ ಉಪವಾಸಕ್ಕೆ ಚೀನಾ ನಿರ್ಬಂಧ

Pinterest LinkedIn Tumblr

china

ಬೀಜಿಂಗ್‌: ರಂಜಾನ್‌ ಸಮಯದಲ್ಲಿ ಸರಕಾರಿ ನೌಕರರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಉಪವಾಸ ಮಾಡುವುದನ್ನು ಚೀನಾ ನಿಷೇಧಿಸಿದೆ.

ಮುಸಲ್ಮಾನರ ಪ್ರಾಬಲ್ಯ ಇರುವ ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲೂ ನಿಷೇಧ ಜಾರಿ ಇರಲಿದ್ದು, ಅಲ್ಲಿ ರೆಸ್ಟೊರೆಂಟ್‌ ಬಾಗಿಲುಗಳು ತೆರೆದಿರಬೇಕು ಎಂದು ಸರಕಾರ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸೂಚಿಸಿದೆ.

ಗುರುವಾರದಿಂದ ರಂಜಾನ್‌ ಮಾಸ ಆರಂಭವಾಗಿದ್ದು, ಬೆಳಗಿನಿಂದ ಸಂಜೆವರೆಗೂ ಮುಸ್ಲಿಮರು ಯಾವುದೇ ಆಹಾರ ಸೇವಿಸುವುದಿಲ್ಲ. ಆದರೆ, ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್‌ ಪಕ್ಷ ರಂಜಾನ್‌ ಉಪವಾಸವನ್ನು ನಿಷೇಧಿಸಿದೆ.

‘ರಂಜಾನ್‌ ಸಮಯದಲ್ಲಿ ಉಪವಾಸ, ನಮಾಜ್ ಅಥವಾ ಇನ್ನಾವುದೇ ಧಾರ್ಮಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಡಿ,’ ಎಂದು ಕ್ಸಿನ್‌ಜಿಯಾಂಗ್‌ ಸ್ಥಳೀಯ ಆಡಳಿತದ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

ಜನಾಂಗೀಯ ಕಲಹ ?

ಈ ನಿರ್ಬಂಧ ಪ್ರಾಂತ್ಯದಲ್ಲಿ ಜನಾಂಗೀಯ ಕಲಹಕ್ಕೆ ಕಾರಣವಾಗಲಿದೆ ಎಂದು ಅಲ್ಪಸಂಖ್ಯಾತ ಮುಸ್ಲಿಂ ಉಯಿಘರ್‌ ಸಮುದಾಯ ಎಚ್ಚರಿಸಿದೆ. ಇತ್ತೀಚಿನ ವರ್ಷಗಳಲ್ಲಿ ಜನಾಂಗೀಯ ಕಲಹದಿಂದ ನೂರಾರು ಮಂದಿ ಮೃತಪಟ್ಟಿದ್ದಾರೆ. ಕ್ಸಿನ್‌ಜಿಯಾಂಗ್‌ ಪ್ರಾಂತ್ಯದಲ್ಲಿ ಭಯೋತ್ಪಾದನೆ ಆತಂಕ ಎದುರಾಗಿದ್ದು, ಮತಾಂದರಿಂದ ಹಿಂಸಾಚಾರ ಹೆಚ್ಚಿದೆ ಎಂದು ಚೀನಾ ಹೇಳಿದೆ.

Write A Comment