ರಾಷ್ಟ್ರೀಯ

ಫ್ರಧಾನಿ ಮೋದಿ ಧ್ಯಾನದಿಂದ ಹೊರಬಂದು ಲಲಿತ್ ಪ್ರಕರಣ ವಿವರಿಸಲಿ: ಕಾಂಗ್ರೆಸ್

Pinterest LinkedIn Tumblr

cong

ನವದೆಹಲಿ: ಲಲಿತ್ ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಧ್ಯಾನದಿಂದ ಹೊರಬಂದು ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ರಾಜೇ ತಮ್ಮ ಸಮ್ಮತಿ ಪಡೆದು ಲಲಿತ್ ಮೋದಿಗೆ ನೆರವು ನೀಡಿದ್ದಾರೆಯೇ ಎನ್ನುವ ಬಗ್ಗೆ ಹೇಳಿಕೆ ನೀಡಲಿ ಎಂದು ಕಾಂಗ್ರೆಸ್ ಒತ್ತಾಯಿಸಿದೆ.

ಲಲಿತ್ ಮೋದಿ ಪ್ರಕರಣದಲ್ಲಿ ಸಿಲುಕಿದ ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ರಾಜೇ ಕೂಡಲೇ ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ಬಿಜೆಪಿ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಕೂಡಾ ಪ್ರಧಾನಿ ಮೋದಿಯವರ ಬಗ್ಗೆ ಅಪನಂಬಿಕೆ ಹೊಂದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಬಗ್ಗೆ ವಿಶ್ವಾಸವಿಲ್ಲ. ದೇಶ ಪರಿಪೂರ್ಣ ನಾಯಕತ್ವದ ಕೊರತೆಯನ್ನು ಎದುರಿಸುತ್ತಿದೆ. ನಿರ್ಧಾರ ತೆಗೆದುಕೊಳ್ಳುವುದು ಪ್ರಧಾನಿ ಮೋದಿಯವರಿಗೆ ಬಿಟ್ಟಿದ್ದು ಎಂದು ಕಾಂಗ್ರೆಸ್ ವಕ್ತಾರ ಟಾಮ್ ವಡಕ್ಕನ್ ಹೇಳಿದ್ದಾರೆ.

ಇಂದಿನ ನಾಯಕರ ದೌರ್ಬಲ್ಯಗಳಿಂದಾಗಿ ವಿಶ್ವಾಸ ಹೊರಟುಹೋಗಿದೆ. ಮತ್ತೊಂದು ಬಾರಿ ದೇಶದಲ್ಲಿ ತುರ್ತುಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ ಎಂದು ಹೇಳಿಕೆ ನೀಡಿ ಬಿಜೆಪಿ ಅಂತರಿಕ ವಲಯದಲ್ಲಿ ಕೋಲಾಹಲ ಸೃಷ್ಟಿಸಿದ್ದಾರೆ.

ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ತಮ್ಮ ಸಮ್ಮತಿ ಪಡೆದು ಲಲಿತ್ ಮೋದಿಗೆ ನೆರವಾಗಿದ್ದಾರೆಯೇ ಅಥವಾ ಅದರಲ್ಲಿ ಮತ್ತೆ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎನ್ನುವ ಬಗ್ಗೆ ಪ್ರಧಾನಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿುದ್ದಾರೆ.

ಕಳಂಕಿತ ಹವಾಲಾ ಆರೋಪಿ ಲಲಿತ್ ಮೋದಿ ಬ್ರಿಟನ್‌ಗೆ ಪ್ರಯಾಣಿಸಲು ಅಗತ್ಯವಾದ ದಾಖಲೆಗಳನ್ನು ಒದಗಿಸುವಲ್ಲಿ ನೆರವಾಗಿದ್ದಾರೆ. ಮೋದಿಯ ವಲಸೆ ಪತ್ರಕ್ಕೆ ವಸುಂಧರಾ ರಾಜೇ ಸಾಕ್ಷಿಯಾಗಿ ಸಹಿಹಾಕಿದ್ದಾರೆ ಎನ್ನಲಾಗಿದೆ.

Write A Comment