ಕರ್ನಾಟಕ

ರು. 2,049 ಕೋಟಿ ಬಂಡವಾಳ ಹೂಡಿಕೆಗೆ ಅನುಮತಿ: ಸಿಎಂ

Pinterest LinkedIn Tumblr

Siddaramaiah274a

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ರಾಜ್ಯ ಉನ್ನತಮಟ್ಟದ ಸಮಿತಿ ಸಭೆಯಲ್ಲಿ ರು. 2,049.75 ಕೋಟಿ ಮೊತ್ತದ ಐದು ಮಹತ್ವದ ಯೋಜನೆಗಳಿಗೆ ಬಂಡವಾಳ ಹೂಡಿಕೆಗೆ ಅನುಮತಿ ನೀಡಲಾಗಿದೆ.

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಐಟಿಬಿಟಿ

ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದು, 3,532 ಮಂದಿಗೆ ಈ ಯೋಜನೆಯಿಂದ ಉದ್ಯೋಗಾವಕಾಶ ಲಭ್ಯವಾಗಲಿದೆ. ಮೆ.ಹಿಮತ್ ಸಿಂಗ್ಕಾ ಸೀಡೆ (ರು.1,325 ಕೋಟಿ), ಮೆ.ಸ್ಟೆಲಿಸ್ ಬಯೋಫಾರ್ಮ್ ಲಿಮಿಟೆಡ್ (ರು.248 ಕೋಟಿ ), ಹರ್ಷ ಶುಗರ್ಸ್ (ರು.213 ಕೋಟಿ ), ಮೆ ಔರಿಕ್ ಇಂಡಸ್ಟ್ರೀಸ್ (ರು.1,356.25ಕೋಟಿ ), ಮೆ.ಚಿಯರ್ಸ್ (ರು.107.50 ) ಕಂಪನಿಗಳಿಗೆ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಲಾಗಿದೆ ಎಂದು ಸಭೆ ಬಳಿಕ ಮುಖ್ಯಮಂತ್ರಿಗಳ ಕಚೇರಿಯಿಂದ ಅಧಿಕೃತ ಪ್ರಕಟಣೆ ನೀಡಲಾಗಿದೆ.

2013-14ನೇ ಸಾಲಿನಲ್ಲಿ ಸರ್ಕಾರ 255 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇದರಿಂದ ರಾಜ್ಯಕ್ಕೆ ರು.42,176.54 ಕೋಟಿ ಬಂಡವಾಳ ಹರಿದು ಬಂದಿದೆ. 1,71,451 ಉದ್ಯೋಗಾವಕಾಶ ಲಭ್ಯವಾಗಲಿದೆ. 2014-15ನೇ ಸಾಲಿನಲ್ಲಿ 108 ಯೋಜನೆಗಳಿಗೆ ಸರ್ಕಾರ ಅನುಮೋದನೆ ನೀಡಿದ್ದು, ರಾಜ್ಯಕ್ಕೆ ರು.54,433.1 ಕೋಟಿ ಬಂಡವಾಳ ಹರಿದು ಬಂದಿದ್ದು 56,101 ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ.

ಜೂ.19ಕ್ಕೆ ಜಿಮ್ ಬಗ್ಗೆ ನಿರ್ಧಾರ

ರಾಜ್ಯದಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ (ಜಿಮ್) ಆಯೋಜನೆ ಮಾಡುವ ಬಗ್ಗೆ ಜೂನ್ 19ರಂದು ಅಂತಿಮ ನಿರ್ಧಾರ ಪ್ರಕಟವಾಗುವ ಸಾಧ್ಯತೆ ಇದೆ. ಉನ್ನತ ಮಟ್ಟದ ಸಮಿತಿ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ಕೈಗಾರಿಕಾ ಇಲಾಖೆ ಹಿರಿಯ ಅಧಿಕಾರಿಗಳ ಜತೆ ಈ ಸಂಬಂಧ ಸುದೀರ್ಘ ಚರ್ಚೆ ನಡೆಸಿದ್ದು, ಜೂನ್ 19ರಂದು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

Write A Comment