ರಾಷ್ಟ್ರೀಯ

ಭಾರತದ ಗಡಿಯಲ್ಲಿ ಮುಂದುವರೆದ ಉಗ್ರರ ಉಪಟಳ

Pinterest LinkedIn Tumblr

sss

ಇತ್ತೀಚೆಗೆ ಭಾರತದ ಗಡಿಯಲ್ಲಿ ಉಗ್ರರ ಉಪಟಳ ಹೆಚ್ಚುತ್ತಿದ್ದು ಜಮ್ಮುವಿನ ಬಾರಾಮುಲ್ಲಾ ಗಡಿ ಪ್ರದೇಶದಲ್ಲಿ ಭಾರತದೊಳಕ್ಕೆ ನುಗ್ಗಲು ಯತ್ನಿಸುತ್ತಿರುವ ಉಗ್ರರು ಯತ್ನಿಸಿದ್ದು ಭಾರತೀಯ ಗಡಿ ಬಧ್ರತಾ ಪಡೆ ಗುಂಡಿನ ಉತ್ತರ ನೀಡಿದೆ.

ಶುಕ್ರವಾರವಷ್ಟೇ ಮಣಿಪುರದಲ್ಲಿ ಹನ್ನೊಂದು ಯೋಧರನ್ನು ಹತ್ಯೆಗೈಯ್ದಿದ್ದ ಉಗ್ರರು ಶನಿವಾರವೂ ಸಹ ತಮ್ಮ ಪೈಶಾಚಿಕ ಕೃತ್ಯ ನಡೆಸಲು ಮುಂದಾಗಿದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಗಡಿ ಭದ್ರತಾ ಪಡೆ ಹರಸಾಹಸ ಪಡುತ್ತಿದ್ದು ಭಾರೀ ಪ್ರಮಾಣದ ಗುಂಡಿನ ಚಕಮಕಿ ನಡೆಯುತ್ತಿದೆ.

ಲಭ್ಯ ಮಾಹಿತಿಗಳ ಪ್ರಕಾರ ಈ ಉಗ್ರರು ಲಷ್ಕರ್ ಇ-ತೈಬಾ ಗೆ ಸೇರಿದವರು ಎನ್ನಲಾಗಿದ್ದು ಈಗಾಗಲೇ ಭಾರತೀಯ ಯೋಧರು ಅವರನ್ನು ಹಿಮ್ಮೆಟ್ಟಿಸಲು ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment