ಅಂತರಾಷ್ಟ್ರೀಯ

ಟೆಕ್ಕಿಂಗ್ ಗೆ ಹೋದವರು ಶವವಾಗಿ ಮರಳಿದರು

Pinterest LinkedIn Tumblr

rw

ಮಲೇಷ್ಯಾದ ಬೋರ್ನೆಯೊದ ಪ್ರಸಿದ್ದ ಕಿನಬಾಲು ಪರ್ವತ ಶಿಖರದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ11 ಪರ್ವತಾರೋಹಿಗಳು ಅಸುನೀಗಿ  8 ಜನ ಕಣ್ಮರೆಯಾದ ಘಟನೆ ನಡೆದಿದ್ದು ಲಭ್ಯ ಮಾಹಿತಿಗಳ ಪ್ರಕಾರ 20 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಶುಕ್ರವಾರ ರಾತ್ರಿ ಬೋರ್ನೆಯೊ ಪ್ರದೇಶದಲ್ಲಿ 5.9 ಪ್ರಮಾಣದ ಭೂಕಂಪ ಸಂಭವಿಸಿದ್ದು ಪರಿಣಾಮವಾಗಿ ಕಿನಬಾಲು ಪರ್ವತದ ಮೇಲ್ಭಾಗದಿಂದ ಟೆಕ್ಕಿಂಗ್ ಮಾರ್ಗಗಳಲ್ಲಿ ಬಂಡೆಗಳು ಉರುಳಿ ಬಿದ್ದವು ಎನ್ನಲಾಗಿದ್ದು ಶುಕ್ರವಾರ ರಾತ್ರಿ ತಡವಾಗಿ 4,095 ಮೀಟರ್ ಎತ್ತರದ ಮೌಂಟ್ ಕಿನಬಾಲು ಪ್ರದೇಶದಲ್ಲಿದ್ದ  30 ವರ್ಷದ ಸ್ಥಳೀಯ ಗೈಡ್ ಮತ್ತು 12 ವರ್ಷದ ಸಿಂಗಾಪುರದ ವಿದ್ಯಾರ್ಥಿನಿ ಸೇರಿ ಇಬ್ಬರ ಶವಗಳನ್ನು ಪತ್ತೆ ಹಚ್ಚಲಾಗಿದ್ದು ಇನ್ನಷ್ಟು ಶವಗಳು ಪತ್ತೆಯಾಗಬೇಕಿದೆ.

ಅಲ್ಲದೇ ಒಟ್ಟು 11 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದ್ದು ಇನ್ನು 8 ಮಂದಿ ಕಾಣೆಯಾಗಿದ್ದು ಅವರ ಶೋಧ ಕಾರ್ಯ ಮುಂದುವರೆದಿದೆ. ಅಲ್ಲದೇ 20 ಕ್ಕೂ ಹೆಚ್ಚು ಮಂದಿ ಈ ಅವಘಡದಿಂದ ಗಾಯಗೊಂಡಿದ್ದು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment