ರಾಷ್ಟ್ರೀಯ

ಗೆಳತಿ ಮೇಲೆ ಅತ್ಯಾಚಾರವೆಸಗಿ ವಿಡಿಯೋ ಮಾಡಿಕೊಂಡ ಯುವಕರು

Pinterest LinkedIn Tumblr

797720-1429528727-rape3ಬರೇಲಿ: 19 ವರ್ಷದ ಗೆಳತಿಯನ್ನು ಹೋಟೆಲಿಗೆ ಕರೆದುಕೊಂಡು ಹೋದ ಯುವಕರು ತಂಪು ಪಾನೀಯದಲ್ಲಿ ಮತ್ತು ಬರುವ ಔಷಧಿ ಬೆರೆಸಿ ಕುಡಿಸಿದ್ದು, ಪ್ರಜ್ಞಾಶೂನ್ಯಳಾಗಿದ್ದ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಮೊಬೈಲಿನಲ್ಲಿ ಚಿತ್ರೀಕರಿಸಿಕೊಂಡಿರುವ ಘಟನೆ ನಡೆದಿದೆ.

ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದ್ದು, ಶುಭಮ್ ಎಂಬ ಯುವಕ ಪಾರ್ಟಿ ನೆಪದಲ್ಲಿ ಈ ಯುವತಿಯನ್ನು ಹೋಟೆಲಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಮುಂಚೆಯೇ ಕಾದು ಕುಳಿತಿದ್ದ ಆತನ ಸ್ನೇಹಿತರಾದ ಶಿವಂ ಕುಮಾರ್ ಹಾಗೂ ಸಚಿನ್ ಯುವತಿಗೆ ಕುಡಿಯಲು ತಂಪು ಪಾನೀಯ ನೀಡಿದ್ದಾರೆ.

ಮತ್ತು ಬರುವ ಔಷಧಿ ಬೆರೆಸಿದ್ದ ಕಾರಣ ಆಕೆಗೆ ಪ್ರಜ್ಞೆ ತಪ್ಪಿದ್ದು, ಮೂವರು ಯುವಕರು ಆಕೆಯ ಮೇಲೆ ಅತ್ಯಾಚಾರವೆಸಗಿ ಅದನ್ನು ಮೊಬೈಲ್ ಮೂಲಕ ಚಿತ್ರೀಕರಿಸಿಕೊಂಡಿದ್ದಾರೆ. ಪ್ರಜ್ಞೆ ಮರಳಿದ ಯುವತಿ ಮನೆಗೆ ತೆರಳಿ ನಡೆದ ವಿಷಯವನ್ನು ಪೋಷಕರಿಗೆ ತಿಳಿಸಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ ವೇಳೆ ಅತ್ಯಾಚಾರ ನಡೆದಿರುವುದು ಖಚಿತಪಟ್ಟಿದ್ದು, ಪರಾರಿಯಾಗಿರುವ ಆರೋಪಿಗಳ ಪತ್ತೆ ಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.

Write A Comment