ಮನೋರಂಜನೆ

ಪಾಕಿಸ್ತಾನದಲ್ಲಿಯೂ ಪ್ರದರ್ಶನವಾಯ್ತು ಕನ್ನಡದ ಚಿತ್ರ

Pinterest LinkedIn Tumblr

926426lucia

ಪಾಕಿಸ್ತಾನ ಭಾರತವನ್ನು ದ್ವೇಷಿಸಬಹುದು, ಆದರೆ ಭಾರತದ ಸಿನಿಮಾವನ್ನಲ್ಲ್ಲಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಹೌದು. ಭಾರತದ ಅದರಲ್ಲಿಯೂ ಕನ್ನಡದ ಸಿನಿಮಾವೊಂದು ಪಾಕಿಸ್ತಾನದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಇದೇ ಮೊದಲ ಬಾರಿಗೆ ಪಾಕಿಸ್ತಾನದಲ್ಲಿ ಕನ್ನಡದ ಚಿತ್ರವೊಂದು ಶನಿವಾರ ಪ್ರದರ್ಶನಗೊಂಡಿದ್ದು, ಕನ್ನಡ ಮಣ್ಣಿನಲ್ಲಿಯೇ ಹೊಸ ಅಲೆ ಎಬ್ಬಿಸಿದ ಲೂಸಿಯಾ ಚಿತ್ರ.

ಪವನ್ ಕುಮಾರ್ ನಿರ್ದೇಶನದ ಈ ಚಿತ್ರ ಕರ್ನಾಟಕದಲ್ಲಿ 2013 ರಲ್ಲಿ ಬಿ ಡುಗಡೆಯಾಗಿತ್ತಲ್ಲದೇ ಈ ಸಿನಿಮಾವನ್ನು ಮೊದಲು ಲಂಡನ್, ಜುರಿಚ್ ಮತ್ತು ಪ್ಯಾರಿಸ್ ಗಳಲ್ಲಿ ಸಿನಿಮೋತ್ಸವದ ಪ್ರಯುಕ್ತ ಪ್ರದರ್ಶಿಸಲಾಗಿತ್ತು. ಇದಾದ ನಂತರ ಪ್ರೇಕ್ಷಕರ ಒತ್ತಾಯದ ಮೇರೆಗೆ ಇದನ್ನು ಅಮೆರಿಕ ಸಿಂಗಪುರ ಮತ್ತು ಆಸ್ಟ್ರೇಲಿಯದ ಹಲವು ನಗರಗಳಲ್ಲಿಯೂ ಕೂಡ ಪ್ರದರ್ಶಿಸಿ ಅಲ್ಲಿನ ಪ್ರೇಕ್ಷಕರಿಂದ ಸೈ ಎನಿಸಿಕೊಂಡಿತ್ತು.

ಇದೀಗ ಪಾಕಿಸ್ತಾನದಲ್ಲಿರುವ ಕನ್ನಡ ಚಿತ್ರ ಅಭಿಮಾನಿಯೊಬ್ಬರ ಆಶಯದ ಮೇರೆಗೆ ಈ ಸಿನಿಮಾ ಶನಿವಾರ ಪ್ರದರ್ಶನ ಕಂಡಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ ಎಂಬ ಸಂತಸವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.

Write A Comment