ರಾಷ್ಟ್ರೀಯ

ಆಟೋ ಹತ್ತಿದ್ದ ವಿದೇಶಿ ಮಹಿಳೆಯ ಅತ್ಯಾಚಾರ; ಇಬ್ಬರ ಬಂಧನ

Pinterest LinkedIn Tumblr


ಗುರುಗ್ರಾಮ (ಜು.20): ವಿದೇಶಿ ಮಹಿಳೆಯನ್ನು ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಗುರುಗ್ರಾಮ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಇಂದು ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸುವ ಸಾಧ್ಯತೆ ಇದೆ.

ಬಂಧಿತರನ್ನು ಸದ್ದಾಮ್​ ಹಾಗೂ ಸಂತೋಷ್​ ಎಂದು ಗುರುತಿಸಲಾಗಿದೆ. ಜು.19ರಂದು ವಿದೇಶಿ ಮಹಿಳೆ ಗುರುಗ್ರಾಮದ ಸಹರಾ ಮಾಲ್​ಗೆ ತೆರಳಿದ್ದರು. ಮಧ್ಯರಾತ್ರಿ ವೇಳೆ ಅವರು ದ್ರೋಣಾಚಾರ್ಯ ಮೆಟ್ರೋ ನಿಲ್ದಾಣಕ್ಕೆ ತೆರಳಲು ಆಟೋ ರಿಕ್ಷಾ ಹತ್ತಿದ್ದರು. ಚಾಲಕನ ಹೊರತಾಗಿ ಮತ್ತೋರ್ವ ವ್ಯಕ್ತಿ ಆಟೋದಲ್ಲಿ ಕುಳಿತಿದ್ದ.

ಆಟೋದಲ್ಲಿದ್ದವು ಮಹಿಳೆಯನ್ನು ಮೆಟ್ರೋ ನಿಲ್ದಾಣಕ್ಕೆ ಕೊಂಡೊಯ್ಯುವ ಬದಲು ಶೀತಲ್​ ಕಾಲೋನಿಗೆ ಕರೆದೊಯ್ದಿದ್ದರು. ಈ ವೇಳೆ ಮಹಿಳೆ ಮೇಲೆ ಇಬ್ಬರೂ ಸೇರಿ ಅತ್ಯಾಚಾರ ಮಾಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ವಿದೇಶಿ ಮಹಿಳೆ ದೂರು ದಾಖಲಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಅವರನ್ನು ಈಗ ಬಂಧಿಸಲಾಗಿದೆ.

ಇಂದು ಆರೋಪಿಗಳನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸುತ್ತಿದ್ದಾರೆ. ವಿದೇಶಿ ಮಹಿಳೆಗೆ ನ್ಯಾಯ ಒದಗಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.

Comments are closed.