Uncategorized

ಮಂಗಳೂರು ಕಾರ್ಮೆಲ್ ಹಿಲ್‌ನಲ್ಲಿ ಬಾಲಯೇಸುವಿನ ವಾರ್ಷಿಕ ಮಹೋತ್ಸವ

Pinterest LinkedIn Tumblr

Kulsher_infnt_jiesus_1

ಮಂಗಳೂರು,ಜ.15 : ಬಿಕರ್ನಕಟ್ಟೆ ಕಾರ್ಮೆಲ್ ಹಿಲ್ ಬಾಲಯೇಸುವಿನ ಪುಣ್ಯಕ್ಷೇತ್ರದಲ್ಲಿ ಬಾಲಯೇಸುವಿನ ವಾರ್ಷಿಕ ಮಹೋತ್ಸವವನ್ನು ಗುರುವಾರ ವಿಜೃಂಭಣೆಯಿಂದ‌ ಆಚರಿಸಲಾಯಿತು. ಬೆಳಿಗ್ಗೆಯಿಂದಲೇ ಕೊಂಕಣಿ, ಮಲಯಾಳಂ, ಇಂಗ್ಲೀಷ್, ಕನ್ನಡ ಭಾಷೆಗಳಲ್ಲಿ ಬಲಿಪೂಜೆಯನ್ನು ಹಾಗೂ ವ್ಯಾದಿಷ್ಟರಿಗೆ ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

ಸಾಯಂಕಾಲ 6 ಗಂಟೆಗೆ ಹಬ್ಬದ ಸಂಭ್ರಮದ ಬಲಿಪೂಜೆಯನ್ನು‌ಅತೀ ವಂ| ಡಾ| ಲೀಯೊಕರ್ನೆಲಿಯೊ(ಧರ್ಮಧ್ಯಕ್ಷರು, ಬೊಪಾಲ್) ರವರು ನೆರವೇರಿಸಿ ಮನಮುಟ್ಟುವ ಪ್ರವಚನ ನೀಡಿ ಸರ್ವ ಭಕ್ತಾದಿಗಳಿಗಾಗಿ ಪ್ರಾರ್ಥಿಸಿದರು.

Kulsher_infnt_jiesus_2 Kulsher_infnt_jiesus_3 Kulsher_infnt_jiesus_4 Kulsher_infnt_jiesus_5 Kulsher_infnt_jiesus_6 Kulsher_infnt_jiesus_7 Kulsher_infnt_jiesus_8 Kulsher_infnt_jiesus_9 Kulsher_infnt_jiesus_10 Kulsher_infnt_jiesus_11 Kulsher_infnt_jiesus_12

ಈ ಹಬ್ಬಕ್ಕೆ ಪೂರ್ವ ಸಿದ್ದತೆಯಾಗಿ ಒಂಭತ್ತು ದಿನಗಳ ಬಲಿಪೂಜೆಗಳನ್ನು ವಿವಿದ ಭಾಷೆಗಳಲ್ಲಿ ನೆರವೇರಿಸಲಾಯಿತು. ನವೇನ ದಿನಗಳಲ್ಲಿ ಭಕ್ತಾದಿಗಳಿಗೆ ವಿಶೇಷವಾಗಿ ಅನ್ನಸಂತರ್ಪಣೆ ವಿತರಿಸಲಾಯಿತು.

ವಂ| ಡಾ| ಚಾರ್ಲ್ಸ್ ಸೆರಾವೊ (ಪ್ರಾಂತ್ಯಾಧಿಕಾರಿಗಳು, ಕರ್ನಾಟಕ- ಗೋವಾ ಪ್ರಾಂತ್ಯ) ಇನ್ನಿತರ ಧರ್ಮಗುರುಗಳೂ, ಧರ್ಮ ಭಗಿನಿಯರೂ ಹಾಗೂ ಸಾವಿರಾರು ಭಕ್ತಾದಿಗಳೂ ಈ ಸಂಭ್ರಮದಲ್ಲಿಪಾಲ್ಗೊಂಡರು.

ವಂ| ಜ್ಯೊತಾವ್ರೊ (ಮಠಾಧಿಪತಿಗಳು, ಕಾರ್ಮೆಲ್ ಹಿಲ್) ಸರ್ವರಿಗೂ ಸ್ವಾಗತಿಸಿ ಧನ್ಯವಾದಸಲ್ಲಿಸಿದರು.

ವಂ| ಎಲಾಯಸ್ ಡಿ’ಸೋಜಾ(ಪುಣ್ಯಕ್ಷೇತ್ರದ ನಿರ್ದೇಶಕರು), ವಂ| ಪ್ರಕಾಶ್‌ಡಿ’ಕುನ್ಹಾ, ವಂ| ದೀಪ್ ಫೆರ್ನಾಂಡಿಸ್, ವಂ| ಬರ್ನಾಬಾಸ್ ಮೋನಿಸ್, ವಂ| ಜೊಸ್ಸಿ ಡಿ’ಸೋಜಾ, ವಂ| ವಾಲ್ಟರ್ ಡಿ’ಸೋಜಾ, ವಂ| ಸ್ಟೀವನ್ ಪಿರೇರಾ, ವಂ| ಗ್ರೇಗರಿ ಡಿ’ಸೋಜಾ ಹಾಗೂ ಇನ್ನಿತರಕ್ಷೇತ್ರದ ಧರ್ಮಗುರುಗಳ ಸಹಕಾರದಲ್ಲಿ ವಿವಿಧ ಸಂಘ ಸಂಸ್ಥೆಗಳಹಾಗೂ ಅಪಾರ ಸ್ವಯಂ ಸೇವಕರ ನಿಸ್ವಾರ್ಥ ಸೇವೆಯಿಂದನೆರವಿನಿಂದಬಾಲಯೇಸುವಿನ ಮಹೋತ್ಸವವು‌ಎಲ್ಲಾಭಕ್ತಾದಿಗಳಿಗೆ ದೈವಾನುಭವವನ್ನೂ ಸಹಸ್ರ ಆಶೀರ್ವಾದಗಳನ್ನೂ ನೀಡುವಲ್ಲಿ ಯಶಸ್ವಿಯಾಯಿತು.

Write A Comment